ಗೋಣಿಕೊಪ್ಪ ವರದಿ, ಸೆ. 7 : ಇಗ್ಗುತಪ್ಪ ಕೊಡವ ಸಂಘದ ವತಿಯಿಂದ ನಡೆಸುತ್ತಿದ್ದ ಕೈಲ್‍ಪೊಳ್ದ್ ಕ್ರೀಡಾಕೂಟವನ್ನು ರದ್ದು ಪಡಿಸಲಾಗಿದೆ.

ಸಂಘದ ವತಿಯಿಂದ ಕೈಲ್‍ಪೊಳ್ದ್ ಆಚರಣೆಯಾಗಿ ಕ್ರೀಡಾಕೂಟ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಆಚರಿಸುವದಿಲ್ಲ. ಇದರ ಹಣವನ್ನು ಒಂದಷ್ಟು ಸಂತ್ರಸ್ತರಿಗೆ ನೀಡಲು ಮುಂದಾಗಿರುವದಾಗಿ ಇಗ್ಗುತಪ್ಪ ಕೊಡವ ಸಂಘದ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.