ಮಡಿಕೇರಿ, ಸೆ. 7: ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದವರಿಗೆ, ವಿವಿಧ ಬ್ಯಾಂಕ್‍ಗಳ ಒಕ್ಕೂಟವು ನಬಾರ್ಡ್ ಸಹಭಾಗಿತ್ವದೊಂದಿಗೆ ಮನೆಗಳನ್ನು ಕಲ್ಪಿಸಿ ಕೊಡಗು ದಿಸೆಯಲ್ಲಿ ಪ್ರತ್ಯೇಕ ಕೊಡಗು ಸಂತ್ರಸ್ತರ ನಿಧಿ ಸ್ಥಾಪಿಸುವ ದಿಕ್ಕಿನಲ್ಲಿ ಪ್ರಯತ್ನಿಸಲು ಜಿಲ್ಲಾ ಸಮನ್ವಯ ಸಮಿತಿ ಸಭೆ ನಿರ್ಧರಿಸಿದೆ. ಇಂದು ಸಂಸದ ಪ್ರತಾಪ್‍ಸಿಂಹ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.ಬ್ಯಾಂಕ್‍ಗಳಿಂದ ಸಾಲ ಪಡೆದ ಸಂತ್ರಸ್ತ ಕುಟುಂಬದವರಿಂದ ಮೂರು ತಿಂಗಳವರೆಗೆ ಬ್ಯಾಂಕುಗಳು ಯಾವದೇ ಮಡಿಕೇರಿ, ಸೆ. 7: ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದವರಿಗೆ, ವಿವಿಧ ಬ್ಯಾಂಕ್‍ಗಳ ಒಕ್ಕೂಟವು ನಬಾರ್ಡ್ ಸಹಭಾಗಿತ್ವದೊಂದಿಗೆ ಮನೆಗಳನ್ನು ಕಲ್ಪಿಸಿ ಕೊಡಗು ದಿಸೆಯಲ್ಲಿ ಪ್ರತ್ಯೇಕ ಕೊಡಗು ಸಂತ್ರಸ್ತರ ನಿಧಿ ಸ್ಥಾಪಿಸುವ ದಿಕ್ಕಿನಲ್ಲಿ ಪ್ರಯತ್ನಿಸಲು ಜಿಲ್ಲಾ ಸಮನ್ವಯ ಸಮಿತಿ ಸಭೆ ನಿರ್ಧರಿಸಿದೆ. ಇಂದು ಸಂಸದ ಪ್ರತಾಪ್‍ಸಿಂಹ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
ಬ್ಯಾಂಕ್‍ಗಳಿಂದ ಸಾಲ ಪಡೆದ ಸಂತ್ರಸ್ತ ಕುಟುಂಬದವರಿಂದ ಮೂರು ತಿಂಗಳವರೆಗೆ ಬ್ಯಾಂಕುಗಳು ಯಾವದೇ ಬಹುತೇಕ ಪ್ರಮಾಣದಲ್ಲಿ ಕಾಫಿ, ಕಾಳುಮೆಣಸು ನಾಶವಾಗಿದೆ. ಆದರಿಂದ ಜಿಲ್ಲೆಗೆ ಅನ್ವಯಿಸುವಂತೆ ಸಾಲ ಮನ್ನಾ ಮಾಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವದು ಎಂದು ಪ್ರತಾಪ್ ಸಿಂಹ ಹೇಳಿದರು.
ಕೊಡಗಿಗೆ ಇಂದು ಕಷ್ಟ ಎದುರಾಗಿದೆ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನ ಪಡೆಯುತ್ತಾರೆ. ಆದರಿಂದ ಮೂರು ತಿಂಗಳವರೆಗೆ ಕೊಡಗಿನವರ ಸಾಲ ವಸೂಲಾತಿ ಮಾಡಬಾರದು ಹಾಗೂ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದಲ್ಲಿ ಇದಕ್ಕಾಗಿ ಹೋರಾಟವನ್ನು ಕೂಡ ರೂಪಿಸಲಾಗುತ್ತದೆ ಎಂದರು.
ಇತರ ಜಿಲ್ಲೆಗೆ ಹೋಲಿಕೆ ಮಾಡಿದ್ದಲ್ಲಿ ಕೊಡಗು ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಸಾಲ ಮರುಪಾವತಿ ಉತ್ತಮವಾಗಿದೆ. ಯಾರೂ ಸಾಲವನ್ನು ಉಳಿಸಿಕೊಳ್ಳುತ್ತಿರಲಿಲ್ಲ. ಆದರೆ ಈ ಬಾರಿ ಪರಿಸ್ಥಿತಿ ಬೇರೆಯಾದ್ದೇ ರೀತಿಯಾಗಿದೆ. ಆದ್ದರಿಂದ ಮರುಪಾವತಿಗೆ ಒತ್ತಾಯಿಸಬಾರದು. ಮಾತ್ರವಲ್ಲ ಹೊಸದಾಗಿ ಲೋನ್ ಪಡೆದುಕೊಳ್ಳುವವರು ಬ್ಯಾಂಕ್‍ಗೆ ಆಗಮಿಸಿದ್ದಲ್ಲಿ ಅವರಿಗೆ ಲೋನ್ ನೀಡಿ, ಮುಂದೆ ಭವಿಷ್ಯ ಕಟ್ಟಿಕೊಳ್ಳಲು ನೆರವಾಗಬೇಕು ಎಂದು ಹೇಳಿದರು.
ಬ್ಯಾಂಕ್‍ನ ಅಧಿಕಾರಿಗಳು ತಮ್ಮ ಸಿಎಸ್‍ಆರ್ ಫಂಡ್‍ನಲ್ಲಿ ಶೇ. 2 ರಷ್ಟು ಹಣವನ್ನು ಸಾರ್ವಜನಿಕ ಕೆಲಸಗಳಿಗೆ ಮೀಸಲಿಡುತ್ತಾರೆ. ಈ ಬಾರಿ ಕೊಡಗಿಗೆ ಹೆಚ್ಚು ಹಣವನ್ನು ಮೀಸಲಿಡುವಂತೆ ಬ್ಯಾಂಕ್ ಅಧಿಕಾರಿಗಳಲ್ಲಿ ಸಂಸದರು ಮನವಿ ಮಾಡಿದರು.
ಈಗಾಗಲೇ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಕೊಡಗಿಗೆ ಅನುದಾನ ನೀಡಿದ್ದಾರೆ. ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಆರಂಭಿಕ ಹಂತದಲ್ಲಿ ತಾನು ಕೂಡ ರೂ. 2.50 ಕೋಟಿ ಹಣವನ್ನು ನೀಡುತ್ತೇನೆ. ಶಾಸಕ ಅಪ್ಪಚ್ಚು ರಂಜನ್ ಕೂಡ ತಮ್ಮ ಶಾಸಕರ ನಿಧಿಯಿಂದ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಸಭೆಗೆ ತಿಳಿಸಿದರು.
(ಮೊದಲ ಪುಟದಿಂದ) ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಸಾಲ ಮನ್ನಾ ಮಾಡಲು ಸರಕಾರವನ್ನು ಒತ್ತಾಯಿಸುವದು ಉತ್ತಮ ನಿರ್ಣಯ. ಈ ನಡುವೆ ಸಂತ್ರಸ್ತರಾಗಿ ರುವವರು ಮುಂದಿನ ಜೀವನ ನಡೆಸಲು ಬ್ಯಾಂಕ್‍ಗೆ ಆಗಮಿಸಿ ಸಾಲ ಕೇಳಿದರೆ, ಸಂಬಂಧಪಟ್ಟ ಅಧಿಕಾರಿ ಗಳು ನಿರ್ಲಕ್ಷ್ಯ ತೋರಬಾರದು. ಜನತೆಗೆ ಸಹಕಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಡುವ ಸಲುವಾಗಿ ಜಿಲ್ಲಾಡಳಿತ ಈಗಾಗಲೇ ಚರ್ಚೆ ನಡೆಸುತ್ತಿದೆ. ಸಂತ್ರಸ್ತರ ಅಹವಾಲನ್ನು ಸ್ವೀಕರಿಸಿ ಶೀಘ್ರದಲ್ಲಿಯೇ ಸೂಕ್ತ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಅಪ್ಪಚ್ಚು ರಂಜನ್ ಹೇಳಿದರು.
ಕೊಡಗಿನಲ್ಲಿ ಉಂಟಾಗಿರುವ ಹಾನಿಯಿಂದ ಸಂತ್ರಸ್ತರಿಗೆ ಅಗತ್ಯ ನೆರವು ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಈಗಾಗಲೇ ಖಾತೆ ತೆರೆದಿದೆ. ಇದಕ್ಕೆ ರಾಜ್ಯದ ವಿವಿಧ ಕಡೆಗಳಿಂದ ದಾನಿಗಳು, ಸಂಘ-ಸಂಸ್ಥೆಗಳು ಹಣ ಹಾಕುತ್ತಿ ದ್ದಾರೆ. ಆದರೆ ಇದು ಕೊಡಗು
(ಮೊದಲ ಪುಟದಿಂದ) ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಸಾಲ ಮನ್ನಾ ಮಾಡಲು ಸರಕಾರವನ್ನು ಒತ್ತಾಯಿಸುವದು ಉತ್ತಮ ನಿರ್ಣಯ. ಈ ನಡುವೆ ಸಂತ್ರಸ್ತರಾಗಿ ರುವವರು ಮುಂದಿನ ಜೀವನ ನಡೆಸಲು ಬ್ಯಾಂಕ್‍ಗೆ ಆಗಮಿಸಿ ಸಾಲ ಕೇಳಿದರೆ, ಸಂಬಂಧಪಟ್ಟ ಅಧಿಕಾರಿ ಗಳು ನಿರ್ಲಕ್ಷ್ಯ ತೋರಬಾರದು. ಜನತೆಗೆ ಸಹಕಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಡುವ ಸಲುವಾಗಿ ಜಿಲ್ಲಾಡಳಿತ ಈಗಾಗಲೇ ಚರ್ಚೆ ನಡೆಸುತ್ತಿದೆ. ಸಂತ್ರಸ್ತರ ಅಹವಾಲನ್ನು ಸ್ವೀಕರಿಸಿ ಶೀಘ್ರದಲ್ಲಿಯೇ ಸೂಕ್ತ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಅಪ್ಪಚ್ಚು ರಂಜನ್ ಹೇಳಿದರು.
ಕೊಡಗಿನಲ್ಲಿ ಉಂಟಾಗಿರುವ ಹಾನಿಯಿಂದ ಸಂತ್ರಸ್ತರಿಗೆ ಅಗತ್ಯ ನೆರವು ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಈಗಾಗಲೇ ಖಾತೆ ತೆರೆದಿದೆ. ಇದಕ್ಕೆ ರಾಜ್ಯದ ವಿವಿಧ ಕಡೆಗಳಿಂದ ದಾನಿಗಳು, ಸಂಘ-ಸಂಸ್ಥೆಗಳು ಹಣ ಹಾಕುತ್ತಿ ದ್ದಾರೆ. ಆದರೆ ಇದು ಕೊಡಗು ಮಾನವೀಯತೆಯ ಆಧಾರದಲ್ಲಿ ಅವರು ಕೇಳುವ ಯೋಜನೆಗಳನ್ನು ಅವರಿಗೆ ತಲಪಿಸಲು ಪ್ರಯತ್ನಿಸಬೇಕು ಎಂದು ಸೂಚಿಸಿದರು.
ನಬಾರ್ಡ್‍ನ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ.ನಾಣಯ್ಯ ಮಾತನಾಡಿ, ಅತಿವೃಷ್ಟಿಯಿಂದ ತೊಂದರೆಗೊಳಗಾದ ಕೊಡಗಿನ ಜನರಿಗೆ ಎಲ್ಲಾ ಬ್ಯಾಂಕುಗಳು ಮುಂದೆ ಬಂದು ಆರ್ಥಿಕ ಸಹಾಯ ನೀಡಿ ಕೊಡಗಿನ ಪುನರ್ ನಿರ್ಮಾಣಕ್ಕೆ ಸಹಾಯ ಮಾಡಬೇಕು ಎಂದು ತಿಳಿಸಿದರು. ಲೀಡ್ ಬ್ಯಾಂಕ್ ವಿಭಾಗೀಯ ಮುಖ್ಯ ಪ್ರಬಂಧಕ ಎಸ್.ಎಲ್. ಗಣಪತಿ ಮಾತನಾಡಿ, ಅತಿವೃಷ್ಟಿ ಸಂದರ್ಭ ಎಲ್ಲಾ ಬ್ಯಾಂಕುಗಳು ಅಗತ್ಯ ನೆರವು ನೀಡುವದಾಗಿ ತಿಳಿಸಿದರು.
ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕ ಗುಪ್ತಾಜಿ ಮಾತನಾಡಿ, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ತೊಂದರೆ ಗೊಳಗಾದವರಿಗೆ ಬ್ಯಾಂಕ್‍ಗಳ ವತಿಯಿಂದ ಎಲ್ಲಾ ರೀತಿಯ ಅಗತ್ಯ ಆರ್ಥಿಕ ಸಹಕಾರ ನೀಡಲಾಗುವದು ಎಂದು ಸಭೆಯಲ್ಲಿ ತಿಳಿಸಿದರು. ವಿವಿಧ ಬ್ಯಾಂಕ್ ಮುಖ್ಯಸ್ಥರು, ಅಧಿಕಾರಿಗಳು ಇತರರು ಇದ್ದರು.