ಶ್ರೀಮಂಗಲ, ಸೆ. 7 : ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ, ಸಾರ್ವಜನಿಕ ಶ್ರೀ ಗೌರಿ ಗಣೇಶ ಸೇವಾ ಸಮಿತಿ ಟಿ. ಶೆಟ್ಟಿಗೇರಿ ಹಾಗೂ ಸಂಭ್ರಮ ಮಹಿಳಾ ಕ್ರೀಡೆ ಹಾಗೂ ಸಾಂಸ್ಕ್ರತಿಕ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಟಿ. ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ಶುಕ್ರವಾರ ಪೂರ್ವಾಹ್ನ 10 ಗಂಟೆಗೆ ಸರಳವಾಗಿ ಕೈಲ್‍ಪೊಳ್ದ್ ಆಚರಣೆ ಹಾಗೂ ಪ್ರಕೃತಿ ವಿಕೋಪದಿಂದ ಉತ್ತರ ಕೊಡಗಿನಲ್ಲಿ ಮೃತಪಟ್ಟವರಿಗೆ ಸಾರ್ವಜನಿಕವಾಗಿ ಶ್ರದ್ದಾಂಜಲಿ ಅರ್ಪಿಸಲಾಯಿತು. ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣರವರ ಮುಂದಾಳತ್ವದಲ್ಲಿ ಸಾಂಕೇತಿಕವಾಗಿ ಕೈಲ್ ಪೊಳ್ದ್ ಆಚರಣೆಯ ಪ್ರಯುಕ್ತ ಸಮಾಜದ ನಿರ್ದೇಶಕರು ಕೊಡವ ವಿಕೋಪದಿಂದ ಉತ್ತರ ಕೊಡಗಿನಲ್ಲಿ ಮೃತಪಟ್ಟವರಿಗೆ ಸಾರ್ವಜನಿಕವಾಗಿ ಶ್ರದ್ದಾಂಜಲಿ ಅರ್ಪಿಸಲಾಯಿತು.

ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣರವರ ಮುಂದಾಳತ್ವದಲ್ಲಿ ಸಾಂಕೇತಿಕವಾಗಿ ಕೈಲ್ ಪೊಳ್ದ್ ಆಚರಣೆಯ ಪ್ರಯುಕ್ತ ಸಮಾಜದ ನಿರ್ದೇಶಕರು ಕೊಡವ ಪ್ರಸ್ತುತ ವರ್ಷ ಪ್ರಕೃತಿ ವಿಕೋಪದಿಂದ ಉತ್ತರ ಕೊಡಗಿನ ಜನರು ಸಂತ್ರಸ್ತ ರಾಗಿದ್ದು ಹಲವರು ಪ್ರಾಣ ಹಾಗೂ ಆಸ್ತಿ ಪಾಸ್ತಿ ಕಳೆದುಕೊಂಡಿರುವ ದರಿಂದ ಇಡೀ ಕೊಡಗು ಶೋಕ ಸಾಗರದಲ್ಲಿ ಮುಳುಗಿರುವ ಹಿನ್ನೆಲೆಯಲ್ಲಿ ಈ ವರ್ಷ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸುತ್ತಿರುವ ಬಗ್ಗೆ ಅಧ್ಯಕ್ಷರು ವಿವರ ನೀಡಿದರು.

ಒಂದು ವಾರದ ನಂತರ ತಾವಳಗೇರಿ

(ಮೊದಲ ಪುಟದಿಂದ) ಮೂಂದ್ ನಾಡ್ ಕೊಡವ ಸಮಾಜ, ಸಾರ್ವಜನಿಕ ಶ್ರೀ ಗೌರಿ ಗಣೇಶ ಸೇವಾ ಸಮಿತಿ ಟಿ. ಶೆಟ್ಟಿಗೇರಿ ಹಾಗೂ ಸಂಭ್ರಮ ಮಹಿಳಾ ಕ್ರೀಡೆ ಹಾಗೂ ಸಾಂಸ್ಕ್ರತಿಕ ಸಂಸ್ಥೆಯ ಪದಾಧಿಕಾರಿಗಳ ತಂಡ ಖುದ್ದಾಗಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಸ್ಥಳಗಳಿಗೆ ಭೇಟಿ ನೀಡಿ ನೈಜ ಸಂತ್ರಸ್ತರ ವಿವರ ಪಡೆದು, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ವ್ಯಾಪ್ತಿಯಲ್ಲಿ ಜನರಿಂದ ಸಂಗ್ರಹಿಸಿದ ವಂತಿಗೆ ಹಣವನ್ನು ಅಕ್ಟೋಬರ್ ತಿಂಗಳಲ್ಲಿ ದಿನಾಂಕ ನಿಗದಿ ಪಡಿಸಿ ನೈಜ ಸಂತ್ರಸ್ತರಿಗೆ ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರ ಸಮ್ಮುಖದಲ್ಲಿ ನೀಡಲು ಸಭೆಯಲ್ಲಿ ತೀರ್ಮಾನಿಸ ಲಾಯಿತು.

ಈ ಸಂದರ್ಭ ಪ್ರಸ್ತುತ ವರ್ಷದ ಪ್ರಕೃತಿ ವಿಕೋಪದಲ್ಲಿ ಮೃತಪಟ್ಟವರ ಬಗ್ಗೆ ಜಿಲ್ಲಾಧಿಕಾರಿಗಳು ನೀಡಿದ ಅಧಿಕೃತ ಹೆಸರುಗಳಾದ ಯಶವಂತ, ವೆಂಕಟರಮಣ, ಬಸಪ್ಪ, ಮೋನಿಷಾ , ಪವನ್ ಅಪ್ಪಯ್ಯ , ಲೀಲಾವತಿ , ಉಮೇಶ್ ರೈ, ಮಲ್ಲನ ಅಮ್ಮವ್ವ , ಫ್ರಾನ್ಸಿಸ್ ಮೊಂತೆರೋ , ಉಮ್ಮವ್ವ , ಬಾಬು, ಮುಕ್ಕಾಟೀರ ಸಾಬು ಉತ್ತಪ್ಪ, ಚಂದ್ರ, ಗೀಲ್ಬರ್ಟ್ ಮೇಂಡೋನ್ಜಾ, ಗೌರಮ್ಮ ಬಸಪ್ಪ ಸೇರಿದಂತೆ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ದಾಂಜಲಿ ಅರ್ಪಿಸಿ, ಪ್ರಕೃತಿ ವಿಕೋಪದಿಂದ ನಷ್ಟ ಕಷ್ಟಕ್ಕೆ ಒಳಗಾಗಿರುವ ಉತ್ತರ ಕೊಡಗಿನ ಜನರಿಗೆ ಎಲ್ಲಾ ರೀತಿಯಲ್ಲಿ ಸಹಕರಿಸಲು ಸಂಕಲ್ಪ ಮಾಡಲಾಯಿತು.