ಮಡಿಕೇರಿ ಸೆ. 7 : ನಗರದ ಕೋಟೆ ಶ್ರೀ ಗಣಪತಿ ದೇವಸ್ಥಾನದಲ್ಲಿ ಶ್ರೀಗಣೇಶ ಚತುರ್ಥಿಯನ್ನು ಸೆಪ್ಟೆಂಬರ್, 12 ಮತ್ತು 13 ರಂದು ಸರಳ ರೀತಿಯಲ್ಲಿ ಆಚರಿಸ ಲಾಗುವದು. ಸೆಪ್ಟೆಂಬರ್, 12 ರಂದು ಬೆಳಗ್ಗೆ 8.30 ಗಂಟೆಯಿಂದ ಗುರು ಗಣಪತಿ ಪೂಜೆ, ಪುಣ್ಯಾಹ, ಸಂಕಲ್ಪ, ಮಹಾಗಣಪತಿ ಹೋಮ, ಪಂಚವಿಂಶತಿ ಸ್ಥಾಪನೆ, ತತ್ಪಕಲಾ ಹೋಮ, ಶಾಂತಿ ಹೋಮ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಸೆಪ್ಟೆಂಬರ್, 13 ರಂದು ಶ್ರೀ ಗಣೇಶ ಚತುರ್ಥಿಯಂದು ಬೆಳಗ್ಗೆ 5 ಗಂಟೆಯಿಂದ ದೇವರ ದರ್ಶನಕ್ಕೆ ಅವಕಾಶ ಇರುತ್ತದೆ. ಬೆಳಗ್ಗೆ 9 ಗಂಟೆಯಿಂದ ಗಣಹೋಮ ನಡೆಯಲಿದೆ. ಅಂದು ರಾತ್ರಿ 8 ಗಂಟೆಯ ತನಕ ದೇವರ ದರ್ಶನಕ್ಕೆ ಅವಕಾಶ ಇರುತ್ತದೆ ಎಂದು ಶ್ರೀ ಓಂಕಾರೇಶ್ವರ ದೇವಾಲಯದ ಇಒ ತಿಳಿಸಿದ್ದಾರೆ.