ಗೋಣಿಕೊಪ್ಪಲು, ಸೆ.7: ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರಂಬಾಡ, ಅಚ್ಚಿನಾಡು, ಎಡೂರು, ಹೊಳೆಕೇರಿ, ಪೈಸಾರಿಯ ಗುಹ್ಯ ಮಾರ್ಗವಾಗಿ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಕ್ರಮವು ತಾ.10ರಂದು ಬೆಳಿಗ್ಗೆ 9.30 ಗಂಟೆಯಿಂದ ನಡೆಯಲಿದೆ. ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು, ಪಂಚಾಯಿತಿ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ಕಣ್ಣಂಗಾಲ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ವಿ.ಎನ್. ಮನೋಜ್ ತಿಳಿಸಿದ್ದಾರೆ. ಈ ಸಂದರ್ಭ ಸಿಡಿಮದ್ದು, ಪಟಾಕಿ, ಗುಂಡು, ಶಬ್ದವನ್ನು ಮಾಡದೆ ಸಾರ್ವಜನಿಕರು ಸಹಕರಿಸಬೇಕು. ಅಲ್ಲದೆ ತೋಟ ಮಾಲೀಕರು, ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು, ಕಾರ್ಮಿಕರು ಎಚ್ಚರದಿಂದಿರಬೇಕೆಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.