ಸೋಮವಾರಪೇಟೆ, ಸೆ. 7: ವಿನಾಕಾರಣ ವ್ಯಕ್ತಿಯೋರ್ವರ ಮೇಲೆ ಗುಂಪೊಂದು ಹಲ್ಲೆ ನಡೆಸಿ, ಕೋವಿ ಯಿಂದ ಗುಂಡು ಹಾರಿಸುವದಾಗಿ ಕೊಲೆ ಬೆದರಿಕೆ ಯೊಡ್ಡಿದ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂಬೂರು ಗ್ರಾಮದ ಮಂಜು ಎಂಬವರ ಮೇಲೆ ಮಾದಾಪುರ ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನ, ಕುಂಬೂರು ಗ್ರಾಮದ ನಂದ, ವಿಕ್ರಂ, ಶಂಭು ಅವರುಗಳು ಹಲ್ಲೆ ನಡೆಸಿದ್ದು, ಕೋವಿಯಿಂದ ಗುಂಡು ಹಾರಿಸಿ ಕೊಲೆ ಮಾಡುವದಾಗಿ ಬೆದರಿಕೆ ಹಾಕಿರುವ ಬಗ್ಗೆ ಠಾಣೆಗೆ ದೂರು ನೀಡಲಾಗಿದ್ದು, ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.