ಗೋಣಿಕೊಪ್ಪ ವರದಿ, ಸೆ. 7: ಮಾಯಮುಡಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಹಾಗೂ ಮಾನಿಲ್ ಅಯ್ಯಪ್ಪ ಯುವಕ ಸಂಘ ಸಹಯೋಗದಲ್ಲಿ ಆಚರಿಸಿಕೊಂಡು ಬರುತ್ತಿದ್ದ ಕೊಡವ-ಅಮ್ಮಕೊಡವ ವಾಲಿಬಾಲ್ ಟೂರ್ನಿಯನ್ನು ಈ ವರ್ಷ ರದ್ದು ಪಡಿಸಲಾಗಿದೆ.
ಕೈಲ್‍ಪೊಳ್ದ್ ನಂತರ ಟೂರ್ನಿ ನಡೆಯುತ್ತಿತ್ತು. ಆದರೆ, ಕೊಡಗಿನಲ್ಲಿ ನಡೆದ ಪ್ರಕೃತಿ ವಿಕೋಪದಿಂದಾಗಿ ಟೂರ್ನಿ ನಡೆಸುತ್ತಿಲ್ಲ ಎಂದು ಮಾಯಮುಡಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಸಣ್ಣುವಂಡ ವಿನು ವಿಶ್ವನಾಥ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.