ಮಡಿಕೇರಿ, ಸೆ. 7: ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರ ನೋವಿಗೆ ಸ್ಪಂದಿಸಿರುವ ಸೋಮವಾರಪೇಟೆಯ ಸಿದ್ದಲಿಂಗೇಶ್ವರ ಯುವಕ ಸಂಘವು ಪ್ರತಿವರ್ಷ ಆಚರಿಸುತ್ತಿದ್ದ ಗೌರಿ ಗಣೇಶ ಉತ್ಸವವನ್ನು ಈ ಬಾರಿ ರದ್ದುಗೊಳಿಸಿದೆ. ಅಲ್ಲದೆ ಸಂಘದ ಸದಸ್ಯ ಎ.ಎಸ್. ರಾಮಣ್ಣ ಅವರು ವೈಯಕ್ತಿಕವಾಗಿ ನೀಡಿರುವ ರೂ. 10 ಸಾವಿರ ಸೇರಿದಂತೆ ಸಂಘ ಒಟ್ಟು 30 ಸಾವಿರ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ.
ಜಿಲ್ಲಾಡಳಿತ ಭವನದಲ್ಲಿ ಮೂವತ್ತು ಸಾವಿರ ರೂ.ಗಳ ಚೆಕ್‍ಅನ್ನು ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರಿಗೆ ಹಸ್ತಾಂತರಿಸುವ ಸಂದರ್ಭ ಸಂಘದ ಅಧ್ಯಕ್ಷÀ ಬಿ.ಯಂ. ವೆಂಕಟೇಶ್, ಕಾರ್ಯದರ್ಶಿ ಡಿ.ಎ.ಡಲೇಶ್ ಕುಮಾರ್, ಖಜಾಂಚಿ ಎನ್.ಎಂ. ಪೂವಯ್ಯ, ಸದಸ್ಯರುಗಳಾದ ಎ.ಎಸ್. ರಾಮಣ್ಣ, ಬಿ.ಹೆಚ್. ಆನಂದ, ಎಸ್.ಡಿ. ಉದಯ್ ಕುಮಾರ್, ಬಿ.ಎಂ. ಶಾಂತಪ್ಪ, ಪಿ.ಕೆ. ಸತೀಶ್, ಸಣ್ಣಯ್ಯ ಮತ್ತಿತರರು ಹಾಜರಿದ್ದರು.