ಮಡಿಕೇರಿ, ಸೆ. 7: ಕೊಡಗು ಜಿಲ್ಲೆಯಾದ್ಯಂತ ಅತಿವೃಷ್ಟಿ ಮತ್ತು ಪ್ರವಾಹದಿಂದ ಸಾರ್ವಜನಿಕರು ತೊಂದರೆಗೀಡಾಗಿದ್ದು, ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಕೃಷಿಕರು ತೋಟ, ಗದ್ದೆಗಳನ್ನು ಕಳೆದುಕೊಂಡಿದ್ದಾರೆ. ಕಾರ್ಮಿಕರು ಹಲವಾರು ಸಂಘಗಳಾದ ಸ್ತ್ರೀ ಶಕ್ತಿ ಸಂಘ, ಧರ್ಮಸ್ಥಳ ಸಂಘ, ಸಗ್ರಾಹ ಸಂಘ, ಎಸ್.ಕೆ.ಎಸ್. ಸಂಘ, ಗ್ರಾಮೀಣ ಕೂಟ, ಸಾಯಿಬಾಬ ಸಂಘ, ಬಿ.ಎಸ್.ಎನ್. ಸಂಘ ಮುಂತಾದ ಸಂಘಗಳಿಂದ ಹಾಗೂ ಕೃಷಿಕರು ಬ್ಯಾಂಕ್‍ಗಳಿಂದ ಸಾಲಗಳನ್ನು ಪಡೆದಿದ್ದು, ಈ ಸಾಲಗಳ ಬಡ್ಡಿಗಳನ್ನು ಮನ್ನಾ-ರಿಯಾಯಿತಿ ನೀಡಲು ಕ್ರಮ ಕೈಗೊಂಡು ಕಾರ್ಮಿಕರ ಸಾಲ ಮರು ಪಾವತಿಗೆ ಬಲವಂತ ಪಡಿಸದಂತೆ ನಿರ್ದೇಶನ ನೀಡಬೇಕಾಗಿ ಮುಖ್ಯಮಂತ್ರಿ ಅವರಿಗೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಪತ್ರದಲ್ಲಿ ಕೋರಿದ್ದಾರೆ.