ಮಡಿಕೇರಿ, ಸೆ. 7: ಇಲ್ಲಿನ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಗರದ ಎ.ವಿ. ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕ್ಲಬ್‍ನ ಅಧ್ಯಕ್ಷ ಕೆ.ಕೆ. ದಾಮೋದರ್ ಧ್ವಜಾರೋಹಣ ನೆರವೇರಿಸಿದರು.

ಲಯನ್ಸ್ ಸಂಸ್ಥೆಯ ಸದಸ್ಯರಾದ ಅಂಬೆಕಲ್ ನವೀನ್, ಮಧುಕರ್ ಶೇಟ್, ನಂಜಪ್ಪ, ಕೋಟಿ, ಉಳ್ಳಾಗಡ್ಡಿ, ಮುರುಗೇಶ್, ಮೋಹನ್‍ದಾಸ್ ಹಾಗೂ ಲಯನೆಸ್ಸ್ ಮತ್ತು ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರಫುಲ ಮತ್ತು ಶಿಕ್ಷಕರು ಹಾಜರಿದ್ದರು.