ವೀರಾಜಪೇಟೆ ಸೆ. 7: ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪಟ್ಟಡ ಮನು ರಾಮಚಂದ್ರ, ಉಪಾಧ್ಯಕ್ಷರಾಗಿ ಪಟ್ರಪಂಡ ರಘು ನಾಣಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಕರ್ತಚ್ಚಿರ ನಂದಾ ಭೀಮಯ್ಯ, ಕೆ.ಆರ್ ವಿನೋದ್, ಅಮ್ಮಣಕುಟ್ಟಂಡ ಯು ಗಣೇಶ್, ಚೆಟ್ಟಿನರವನ ಪಿ. ಚಂದ್ರಶೇಖರ್, ಅಚ್ಚಪಂಡ ಎಂ. ಬೋಪಣ್ಣ, ವೈ. ರಾಜು, ಬಿ.ಆರ್. ವೇದಾತ್ಮ, ಕರ್ತಚ್ಚಿರ ಎಂ. ಕಾವೇರಮ್ಮ, ಬಿ.ಪಿ. ಸ್ವಾತಿ, ಅಮ್ಮಣಕುಟ್ಟಂಡ ಟಿ. ಮೀನಾ ಅವರುಗಳು ಆಯ್ಕೆಯಾಗಿದ್ದಾರೆ, ಚುನಾವಣಾಧಿಕಾರಿಯಾಗಿ ಗಣೇಶ್ ಕುಮಾರ್ ಕಾರ್ಯನಿರ್ವಹಿಸಿದರು.