ಸೋಮವಾರಪೇಟೆ, ಸೆ. 7: ಮಳೆ ಹಾನಿ ಸಂತ್ರಸ್ತರಿಗೆ ವಿತರಿಸಲು ಆಹಾರ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಲಾರಿ ಹಾನಗಲ್ ಗ್ರಾಪಂ ಸಮೀಪ ಅಪಘಾತ ಕ್ಕೀಡಾದ ಘಟನೆ ಸಂಭವಿಸಿದೆ.
ಖಾಸಗಿ ಸಂಸ್ಥೆಯೊಂದು ಕೇಬಲ್ ಅಳವಡಿಸಲು ರಸ್ತೆ ಬದಿಯಲ್ಲಿ ತೆಗೆದಿರುವ ಗುಂಡಿಗೆ ಲಾರಿಯ ಚಕ್ರ ಸಿಲುಕಿದೆ. ನಂತರ ಲಾರಿ ಎಳೆದು, ಆಹಾರ ಸಾಮಗ್ರಿಗಳು ಪಂಚಾಯಿತಿ ಗೋದಾಮಿನಲ್ಲಿ ಇಡಲಾಗಿದೆ.
ರಸ್ತೆ ಬದಿಯಲ್ಲಿ ತೆಗೆದಿರುವ ಗುಂಡಿಯನ್ನು ವ್ಯವಸ್ಥಿತವಾಗಿ ಮುಚ್ಚದೆ ಇರುವದರಿಂದ ಅಲ್ಲಲ್ಲಿ ಅಪಘಾತಗಳು ಸಂಭವಿಸುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.