ನಾಪೆÇೀಕ್ಲು, ಸೆ. 8: ಕುಂಜಿಲ - ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಜಿಲ ಗ್ರಾಮದ ವಾಟೆಕಾಡು ಪೈಸಾರಿ ಬಳಿ ಕೆಸರು ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ಹುಲಿಯ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು, ಜನ ಭಯಭೀತರಾಗಿದ್ದಾರೆ.

ವಾಟೆಕಾಡು ಪೈಸಾರಿಯ ರಸ್ತೆ ಮೇಲ್ಭಾಗದ ಪಿ.ಸಿ. ಸುರೇಶ್ ತನ್ನ ಗೆಳೆಯರಾದ ಕೆ.ಆರ್. ದೇವಯ್ಯ, ಕೆ.ಎಂ. ಸೋಮಯ್ಯ, ಪಿ.ಎ.ದೇವಯ್ಯ ಅವರೊಂದಿಗೆ ತೆರಳುವ ಸಂದರ್ಭ ಸುಮಾರು 2 ಕಿ.ಮೀ ದೂರದ ಕೆಸರು ರಸ್ತೆಯಲ್ಲಿ ಹುಲಿಯ ಹೆಜ್ಜೆಗುರುತು ಕಾಣಿಸಿಕೊಂಡಿದೆ. ಆದರೆ ಶನಿವಾರ ಇನ್ನೂ ಮೇಲ್ಬಾಗದಲ್ಲಿರುವ ತೋಡು ಕೆರೆ ಕಂಚಿಯಂಡ ಕುಟುಂಬಸ್ಥರ ಬದಿಗಾಗಿ ಬೆಟ್ಟಕ್ಕೆ ತೆgಳಿರುವದಾಗಿ ಸತೀಶ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಈ ಪ್ರದೇಶದಲ್ಲಿ ಶಾಲಾ ಮಕ್ಕಳ ಓಡಾಟವಿಲ್ಲದಿದ್ದರೂ ಹಸು, ಕುರಿ ಮೇಯಿಸುವವರು ಪ್ರತೀ ನಿತ್ಯ ಸಂಚರಿಸುತ್ತಿದ್ದಾರೆ. ಬೆಟ್ಟದ ಭಾಗದಲ್ಲಿ ಕಂಚಿಯಂಡ ಮತ್ತು ಕುಡಿಯರ ಕುಟುಂಬಸ್ಥರ ಎಂಟು ಮನೆಗಳಿವೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಹುಲಿ ಕಂಡು ಬಂದರೆ ತಕ್ಷಣ ತಿಳಿಸುವಂತೆ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.