ಗೋಣಿಕೊಪ್ಪ ವರದಿ, ಸೆ. 9: ಮೂಡಬಿದ್ರೆ ಆಳ್ವಾಸ್ ಕ್ಲಬ್ ಸಹಯೋಗದಲ್ಲಿ ಅಲ್ಲಿನ ಸ್ವರಾಜ್ ಮೈದಾನದಲ್ಲಿ ಆಯೋಜಿಸಿದ್ದ ಕರ್ನಾಟಕ ಕಿರಿಯ ಹಾಗೂ ಹಿರಿಯ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಗೋಣಿಕೊಪ್ಪ ಅಶ್ವಿನಿ ಫೌಂಡೇಷನ್‍ನ ಕ್ರೀಡಾಪಟುಗಳು ಮೂರು ಪದÀಕ ಗೆದ್ದ ಸಾಧನೆ ಮಾಡಿದ್ದಾರೆ.
ಪುರುಷರ ಅಥ್ಲೆಟಿಕ್‍ನಲ್ಲಿ ಲಾಂಗ್‍ಜಂಪ್‍ನಲ್ಲಿ ಆಶ್ವಿನಿ ಫೌಂಡೇಶನ್‍ನ ರಾಧಕೃಷ್ಣ 7.43 ಮೀ ಜಿಗಿದು ಚಿನ್ನದ ಪದಕ ಪಡೆದುಕೊಂಡರು. ಪೂರ್ಣವೇಗದ ಓಟದಲ್ಲಿ (ಸ್ಪ್ರಿಂಟ್) 10.7 ಸೆಕೆಂಡ್‍ನಲ್ಲಿ ಓಡಿ ಬೆಳ್ಳಿ ಪದಕ ಪಡೆದರು.
18 ವರ್ಷದೊಳಗಿನ ಬಾಲಕಿಯರ ಹೈಜಂಪ್‍ನಲ್ಲಿ ಲೋಚನ ಬೋಪಣ್ಣ ಕಂಚಿನ ಪದಕ ಪಡೆದರು. ಸುಮಾರು 10 ಕ್ರೀಡಾಪಟುಗಳು ಅಶ್ವಿನಿ ಫೌಂಡೇಶನ್‍ನಿಂದ ಪಾಲ್ಗೊಂಡಿದ್ದರು. ಕೋಚ್ ಆಗಿ ಮುರುಳಿಧರನ್ ಕಾರ್ಯನಿರ್ವಹಿಸಿದರು.
ವರದಿ - ಸುದ್ದಿಪತ್ರ