ವೀರಾಜಪೇಟೆ, ಸೆ. 9: ವೀರಾಜಪೇಟೆ ಬಳಿಯ ಕಲ್ಲುಬಾಣೆಯ ಯುವಕರಿಬ್ಬರು ಅಲ್ಲಿನ ಮನೆಯೊಂದರ ಬಾಗಿಲು ತಟ್ಟಿ ಒಳನುಗ್ಗಿ ಮನೆಯ ಯಜಮಾನಿ ಮಹಿಳೆಯನ್ನು ಎಳೆದಾಡಿ ದಾಂಧಲೆ ನಡೆಸಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಕಲ್ಲುಬಾಣೆಯ ನಿವಾಸಿ ಅಮೀನಾ (55) ಎಂಬಾಕೆ ಮಧ್ಯಾಹ್ನ ಊಟಮುಗಿಸಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭ ಕಲ್ಲುಬಾಣೆಯ ಸುಬ್ರಮಣಿ ಎಂಬವರ ಪುತ್ರ ಪ್ರಕಾಶ್ (27) ಹಾಗೂ ಮತ್ತೋರ್ವ 17 ವರ್ಷ ಪ್ರಾಯದ ಅಪ್ರಾಪ್ತ ಬಾಲಕ ಗಾಂಜಾದ ಅಮಲು ತಲೆಯಲ್ಲಿದ್ದಾಗ ಅಮೀನಾ ಒಂಟಿಯಾಗಿರುವದನ್ನು ತಿಳಿದು ಮನೆಯ ಒಳಗೆ ನುಗ್ಗಿ ಮಹಿಳೆಯನ್ನು ಎಳೆದಾಡಿ ಮಾನಭಂಗಕ್ಕೆ ಯತ್ನಿಸಿರುವದಾಗಿ ವೀರಾಜಪೇಟೆ ನಗರ ಠಾಣೆ ಪೊಲೀಸರಿಗೆ ಅಮೀನಾ ದೂರು ನೀಡಿದ ಮೇರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವದಾಗಿ ಡಿ.ವೈ.ಎಸ್.ಪಿ. ನಾಗಪ್ಪ ತಿಳಿಸಿದ್ದಾರೆ.
ಪೊಲೀಸರು ಆರೋಪಿಗಳÀನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ಆರೋಪಿಗಳನ್ನು 15 ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶಿಸಿದ್ದಾರೆ.