ಕೂಡಿಗೆ, ಸೆ. 9: ಹಾರಂಗಿ ಅಣೆಕಟ್ಟೆಯ ಮುಂಭಾಗದಿಂದ ಮುಖ್ಯ ನಾಲೆಗೆ ಈಗಾಗಲೇ ರೈತರಿಗೆ ಬೇಸಾಯಕ್ಕೆ ನೀರನ್ನು ಹರಿಸಲಾಗುತ್ತಿದೆ. ಕಳೆದ ತಿಂಗಳಲ್ಲಿ ಸುರಿದ ಭಾರಿ ಮಳೆ ಗಾಳಿಯಿಂದಾಗಿ ಹಾರಂಗಿಯಿಂದ ಹುದುಗೂರುವರೆಗೆ 50ಕ್ಕೂ ಹೆಚ್ಚು ಮರಗಳು ಬುಡ ಸಮೇತ ಮುಖ್ಯ ನಾಲೆಕಡೆಗೆ ಬಾಗಿವೆ.
ನಾಲೆಗೆ ಅಡ್ಡಲಾಗಿ ಬಿದ್ದಿರುವ 25ಕ್ಕೂ ಹೆಚ್ಚು ಮರಗಳನ್ನು ಹಾರಂಗಿ ಕಾವೇರಿ ನೀರಾವರಿ ಇಲಾಖೆಯ ವತಿಯಿಂದ ಕ್ರೈನ್ ಮೂಲಕ ತೆರವು ಮಾಡಲಾಯಿತು.
ಇಲಾಖೆಯ ಸಹಾಯಕ ಇಂಜಿನಿಯರ್ ನಾಗರಾಜ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಧರ್ಮರಾಜ್, ಸಹಾಯಕ ಇಂಜಿನಿಯರ್ ನಾಗರಾಜ್ ಸೇರಿದಂತೆ ಹಾರಂಗಿಯಿಂದ ಹುದುಗೂರುವರೆಗಿನ ರೈತರು ಇದ್ದರು.