ವೀರಾಜಪೇಟೆ, ಸೆ. 9: ವೀರಾಜಪೇಟೆಯ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದ ಗೌರಿಗಣೇಶ ಉತ್ಸವ ಸಮಿತಿಯ ಎನ್.ವೆಂಕಟೇಶ್ ಕಾಮತ್ ಟ್ರಸ್ಟ್ ಸಹಯೋಗದೊಂದಿಗೆ ತಾ. 16ರಂದು ಅಪರಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ದೇವಾಲಯದ ಸಭಾಂಗಣದಲ್ಲಿ “ವಾಯ್ಸ್ ಆಫ್ ವೀರಾಜಪೇಟೆ 2018” ಸಂಗೀತ ಸ್ಫರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಎನ್. ರವೀಂದ್ರನಾಥ್ ಕಾಮತ್ ತಿಳಿಸಿದ್ದಾರೆ.
ಸ್ಪರ್ಧೆಯನ್ನು ಜೂನಿಯರ್, ಸೀನಿಯರ್ ಎಂಬದಾಗಿ ವಿಂಗಡಿಸಲಾಗಿದ್ದು, ಸ್ಫರ್ಧೆಯಲ್ಲಿ ಭಾಗವಹಿಸಿ ಹಾಡುವ ಹಾಡನ್ನು ಗೀತಾ ಆರ್ಕೆಸ್ಟ್ರಾ ತಂಡದ ಮೋನಿಕ್ ಅವರಿಗೆ ಮೊ. ನಂ. 9741748476 ಎಸ್.ಎಂ.ಎಸ್. ಮೂಲಕ ತಿಳಿಸಬಹುದಾಗಿದೆ. ಶಿವಮೊಗ್ಗದ ಗೀತಾ ಆರ್ಕೆಸ್ಟ್ರಾ ತಂಡ ಸಂಗೀತ ಸಂಯೋಜಕರಾಗಿದ್ದು ಹಿನ್ನೆಲೆ ಗಾಯಕರಾದ ಸುಬ್ರಮಣ್ಯ ಭಟ್ ಹಾಗೂ ಅನನ್ಯ ಭಟ್ ಭಾಗವಹಿಸಲಿದ್ದಾರೆ.
ಸಂಗೀತ ಸ್ಪರ್ಧೆಯ ಹೆಚ್ಚಿನ ಮಾಹಿತಿಗಾಗಿ ಜೆ.ಎನ್.ಸಂಪತ್ಕುಮಾರ್ ಮೊ. 9008509929, ಎನ್. ವೀರೇಂದ್ರ ಕಾಮತ್ ನಂ. 9916257764 ಸಂಪರ್ಕಿಸಬಹುದಾಗಿದೆ.