ಮಡಿಕೇರಿ, ಸೆ. 9: ಮಡಿಕೇರಿ ತ್ಯಾಗರಾಜ ನಗರದ ತಣಲ್ ಕೂರ್ಗ್ ಸಂಸ್ಥೆಯಲ್ಲಿ ದಾಖಲಾಗಿದ್ದ ಅಂದಾಜು 50 ವರ್ಷ ಪ್ರಾಯದ ಬಿಂದು ಎಂಬ ಮಹಿಳೆ ತಾ. 5ರಂದು ಕಾಣೆಯಾಗಿದ್ದಾರೆ. ತಿಳಿ ಗುಲಾಬಿ ಹಾಗೂ ಬೆಳ್ಳಗಿನ ಸಣ್ಣ ಹೂವುಗಳುಳ್ಳ ನೈಟಿ ಮತ್ತು ಕಪ್ಪು ಸ್ವೆಟರ್ ಧರಿಸಿದ್ದಾರೆ. ಕನ್ನಡ, ತುಳು, ಮಲಯಾಳ ಭಾಷೆ ಬಲ್ಲವರಾಗಿದ್ದು, ಇವರನ್ನು ಕಂಡವರು ಕೊಡಗು ಮಹಿಳಾ ಪೊಲೀಸ್ ಠಾಣೆ 08272-228725 ಸಂಖ್ಯೆಗೆ ತಿಳಿಸುವಂತೆ ಕೋರಲಾಗಿದೆ.