ಕುಶಾಲನಗರ, ಸೆ. 9: ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಬಂದ ಪ್ರವಾಹದ ಹಿನ್ನೆಲೆ ಕುಶಾಲನಗರ ಸಮೀಪದ ಆವರ್ತಿ ಗ್ರಾಮದ ಕಾಫಿ ತೋಟವೊಂದು ಸಂಪೂರ್ಣ ನಾಶಗೊಂಡಿರುವ ಘಟನೆ ನಡೆದಿದೆ.
ಕುಶಾಲನಗರ ಸಮೀಪದ ವಾಲ್ನೂರು ಕಾಫಿ ಬೆಳೆಗಾರ ರಾದ ಜೆಮ್ಸಿ ಪೊನ್ನಪ್ಪ ಅವರಿಗೆ ಸೇರಿದ ಸರ್ವೆ ನಂ 91 ರ 10 ಎಕರೆ, 90/1 ರ 5.25 ಎಕರೆ, 90/2 ರ 5.10 ಎಕರೆ ಮತ್ತು ಸರ್ವೆ ನಂ 6 ರ 4.20 ಎಕರೆ ಸೇರಿದಂತೆ ಒಟ್ಟು 25 ಎಕರೆಯಲ್ಲಿ ಬೆಳೆದು ನಿಂತಿದ್ದ ಕಾಫಿ, ಮೆಣಸು, ಅಡಿಕೆ ಮತ್ತಿತರ ಗಿಡಗಳು ಸಂಪೂರ್ಣ ನಾಶಗೊಂಡಿವೆ. ನಿರಂತರವಾಗಿ 10 ದಿನಗಳ ಕಾಲ ಕಾವೇರಿ ನದಿ ನೀರು ಪ್ರವಾಹ ನಿಂತ ಹಿನ್ನೆಲೆ ಈ ವ್ಯಾಪ್ತಿಯಲ್ಲಿದ್ದ ಬಹುತೇಕ ಕೃಷಿ ಹಾನಿಯಾಗಿದ್ದು ಅಂದಾಜು 75 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ನಷ್ಟ ಉಂಟಾಗಿದೆ ಎಂದು ಜೆಮ್ಸಿ ಪೊನ್ನಪ್ಪ ಮಾಹಿತಿ ನೀಡಿದ್ದಾರೆ.