ಸಿದ್ದಾಪುರ, ಸೆ. 9: ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿದ್ದಾರೆಂದು ಆರೋಪಿಸಿ ಕರಡಿಗೋಡು ಗ್ರಾಮದ ಸಂತ್ರಸ್ತರು ಸಿದ್ದಾಪುರ ಗ್ರಾಮ ಪಂಚಾಯಿತಿ ಪಿ.ಡಿ.ಒ ಹಾಗೂ ಕರಡಿಗೋಡು ಗ್ರಾಮದ ಸದಸ್ಯರುಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಪ್ರಸಂಗ ನಡೆಯಿತು.

ಕಳೆದೆರೆಡು ದಿನಗಳ ಹಿಂದೆ ಸಿದ್ದಾಪುರದ ಖಾಸಗಿ ಸಂಸ್ಥೆಯೊಂದು ಕರಡಿಗೋಡು ಗ್ರಾಮದ ಸಂತ್ರಸ್ತರ ಕುಟುಂಬದವರಿಗೆ ಸಹಾಯದ ಹಸ್ತ ಚಾಚಿತ್ತು. ಆದರೆ ಕರಡಿಗೋಡು ಸಂತ್ರಸ್ತರ ಪಟ್ಟಿಯಲ್ಲಿ ಸಿದ್ದಾಪುರದ ಗ್ರಾ.ಪಂ ಪಿ.ಡಿ.ಒ ಹಾಗೂ ಆ ಭಾಗದ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಸೇರಿ ಹಲವಾರು ಮಂದಿ ನೈಜ ಸಂತ್ರಸ್ತರ ಹೆಸರುಗಳನ್ನು ಕೈ ಬಿಟ್ಟು ಸಂಸ್ಥೆಗೆ ಪಟ್ಟಿಯನ್ನು ನೀಡಿ ತಾರತಮ್ಯವೆಸಗಿ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ಕರಡಿಗೋಡುವಿನ ನದಿದಡದ ಸಂತ್ರಸ್ತರು ಪಂಚಾಯಿತಿಗೆ ಆಗಮಿಸಿ ಪಿ.ಡಿ.ಓ. ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಯಮುನ, ವೈಜು, ಎಂ.ಎ. ಕೃಷ್ಣ ಇನ್ನಿತರರು ಹಾಜರಿದ್ದರು.