ಮಡಿಕೇರಿ, ಸೆ. 9: ಜೋಡುಪಾಲದ ಪ್ರಕೃತಿ ವಿಕೋಪದ ದುರಂತದಲ್ಲಿ ಮನೆ ಕಳೆದುಕೊಂಡು ಕಲ್ಲುಗುಂಡಿ ನಿರಾಶ್ರಿತರ ಕೇಂದ್ರ ಸೇರಿದ್ದ ವಾರಿಜ ಎನ್.ಕೆ. ಅವರ ಮದರಂಗಿ ಶಾಸ್ತ್ರ ಕಾರ್ಯಕ್ರಮ ನಿರಾಶ್ರಿತರ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಕೇಂದ್ರದ ಸ್ವಯಂ ಸೇವಕರ ಕಾರ್ಯ ಮೆಚ್ಚುಗೆಗೆ ಪಾತ್ರವಾಯಿತು.