ಮಡಿಕೇರಿ, ಸೆ. 9: ಐಬಿಪಿಎಸ್ ಅವರು ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ ಖಾಲಿಯಿರುವ ಪ್ರೊಬೇಷನರಿ ಅಧಿಕಾರಿ/ ಮ್ಯಾನೇಜ್‍ಮೆಂಟ್ ಟ್ರೈನಿ ಹುದ್ದೆಗಳಿಗೆ ಅಕ್ಟೋಬರ್‍ನಲ್ಲಿ ನಡೆಸಲು ಉದ್ದೇಶಿಸಿರುವ ಸಾಮಾನ್ಯ ಲಿಖಿತ ಪರೀಕ್ಷೆಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಪರೀಕ್ಷಾ ಪೂರ್ವ ಉಚಿತ ತರಬೇತಿ ತಾ. 20 ರಿಂದ 29 ರವರೆಗೆ ಆಯೋಜಿಸಲಾಗಿದೆ.