ನಾಪೆÇೀಕ್ಲು, ಸೆ. 9: ಪ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಮರ-ಗಿಡಗಳ ಪೆÇೀಷಣೆಯಿಂದ ನೆಲ-ಜಲ ಸಂರಕ್ಷಣೆ ಸಾಧ್ಯ. ಪ್ರಾಕೃತಿಕ ಸವಾಲುಗಳನ್ನು ಎದುರಿಸಲು ಎಲ್ಲರೂ ಸಮರ್ಥರಾಗಬೇಕು ಎಂದು ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸು ಪೆಮ್ಮಯ್ಯ ಹೇಳಿದರು.

ಸರಕಾರದ ಹಸಿರು ಕರ್ನಾಟಕ ಯೋಜನೆಯಡಿ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ನೇತಾಜಿ ವಿದ್ಯಾಸಂಸ್ಥೆ ಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ‘ಮನೆಗೊಂದು ಮರ ಊರಿಗೊಂದು ತೋಪು’ ಎಂಬ ಧ್ಯೇಯದೊಂದಿಗೆ ಆಯಾ ಪ್ರದೇಶಕ್ಕನುಗುಣವಾಗಿ ಸ್ಥಳೀಯ ಜಾತಿಯ ಗಿಡ-ಮರಗಳನ್ನು ಬೆಳೆಸುವದರ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕಾಗಿದೆ ಎಂದರು.

ಕಕ್ಕಬೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಮಾತನಾಡಿ, ಪ್ರಾಕೃತಿಕ ಅಸಮ ತೋಲನದಿಂದ ಮಳೆಯ ಪ್ರಮಾಣ ಏರುಪೇರಾಗುತ್ತಿದೆ. ಪ್ರಾಕೃತಿಕ ವಿಕೋಪಗಳಿಂದ ಜೀವ ಸಂಕುಲ ಸಂಕಷ್ಟಕ್ಕೆ ಸಿಲುಕುತ್ತಿದೆ. ನಿಸರ್ಗದ ಅಂಶಗಳನ್ನು ಹಾನಿಗೊಳಿಸಬಾರದು ಎಂದರು.

ಪಿಡಿಓ ವೀಣಾ ಕುಮಾರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಚಂಗೇಟಿರ ಕುಮಾರ್ ಸೋಮಣ್ಣ, ಬೈರುಡ ಮುತ್ತಪ್ಪ, ಬದ್ದಂಜೆಟ್ಟೀರ ದೇವಿ ದೇವಯ್ಯ, ನೇತಾಜಿ ಪ್ರೌಢಶಾಲೆಯ ಶಿಕ್ಷಕ ವೃಂದ ಪಾಲ್ಗೊಂಡಿದ್ದರು. ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ವತಿಯಿಂದ ಗಿಡಗಳನ್ನು ವಿತರಿಸಲಾಯಿತು.