ರೂ. 3 ಸಾವಿರ ದಂಡ
ಶನಿವಾರಸಂತೆ, ಸೆ. 9: ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿದ ಕಾರು ಚಾಲಕನೊಬ್ಬನಿಗೆ ಸೋಮವಾರಪೇಟೆ ಸಿ.ಜೆ.ಎಂ. ನ್ಯಾಯಾಲಯ ರೂ. 3 ಸಾವಿರ ದಂಡ ವಿಧಿಸಿದ ಘಟನೆ ನಡೆದಿದೆ.
ಗೌಡಳ್ಳಿ ಪಂಚಾಯಿತಿ ವ್ಯಾಪ್ತಿಯ ಶಾಂತವೇರಿ ಗ್ರಾಮದ ಎಸ್.ಎಲ್. ಸೋಮೇಶ್ ಎಂಬವರು ಆ. 23 ರಂದು ಶನಿವಾರಸಂತೆ ನಗರದಲ್ಲಿ ತಮ್ಮ ಕಾರು (ನಂ.ಕೆಎ 03, ಎಂಇ-6725)ನ್ನು ಮದ್ಯಪಾನ ಮಾಡಿ ಚಾಲಿಸುತ್ತಿದ್ದಾಗ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಕಾರನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು. ಕಾರು ಮಾಲಿಕ ಸೋಮೇಶ್ ಸೋಮವಾರಪೇಟೆ ಸಿಜೆಎಂ ನ್ಯಾಯಾಲಯಕ್ಕೆ ಹಾಜರಾಗಿ ರೂ. 3 ಸಾವಿರ ದಂಡ ಪಾವತಿಸಿ, ಶನಿವಾರಸಂತೆ ಪೊಲೀಸ್ ಠಾಣೆಯ ವಶದಲ್ಲಿದ್ದ ಕಾರನ್ನು ಬಿಡಿಸಿಕೊಂಡಿದ್ದಾರೆ.