ಮಡಿಕೇರಿ, ಸೆ. 9: ಪ್ರಕೃತಿ ವಿಕೋಪಕ್ಕೆ ಸಿಲುಕಿ ಹಾನಿಗೀಡಾಗಿರುವ ಕಾಂಡನಕೊಲ್ಲಿ ಗ್ರಾಮದ ಬಾಲಾಜಿ ತೋಟದ ಕೆಳಭಾಗದಲ್ಲಿರುವ ಮುನಿಯಪ್ಪನ ರವಿ ಅವರ ಮನೆಯೊಳಗಿದ್ದ ಸಾಮಾಗ್ರಿಗಳು ಯುವಕರ ತಂಡ 2 ಕಿ.ಮೀ. ದೂರದವರೆಗೆ ಕಾಡಿನೊಳಗೆ ಹೊತ್ತು ತಂದು ಬಾಲಾಜಿ ತೋಟದ ಬಂಗಲೆಯಲ್ಲಿ ಇಡಲಾಗಿದೆ. ಮಕ್ಕಂದೂರು ಗ್ರಾ.ಪಂ. ಸದಸ್ಯ ಬಿ.ಎನ್. ರಮೇಶ್ ಮುಂದಾಳತ್ವದಲ್ಲಿ ಏಕದಂತ ಯುವಕ ಸಂಘದ ಯುವಕರು ಪಾಲ್ಗೊಂಡಿದ್ದರು.