ಸಿದ್ದಾಪುರ, ಸೆ. 9: ಪ್ರಾಕೃತಿಕ ವಿಕೋಪದಿಂದ ಸಂಭವಿಸಿದ ಸ್ಥಳ ಹಾಗೂ ಬೋಯಿಕೇರಿಯಿಂದ ಮಡಿಕೇರಿ-ಸುಂಟಿಕೊಪ್ಪ ರಸ್ತೆಯ ಬದಿಯಲ್ಲಿ ‘ಕೊಡಗು ಫಾರ್ ಟುಮಾರೋ’ ಎಂಬ ಸ್ವಯಂ ಸೇವಕರು ಉತ್ತಮ ಶ್ರಮದಾನ ಮಾಡಿ ಸ್ವಚ್ಛಗೊಳಿಸಿದರು.

ಕೊಡಗು ಮೂಲದ ಕೆಲವು ಯುವಕ-ಯುವತಿಯರು ಸೇರಿ ‘ಕೊಡಗು ಫಾರ್ ಟುಮಾರೋ’ ಎಂಬ ಹೆಸರಿನಲ್ಲಿ ಸ್ವಯಂ ಸೇವಕರನ್ನು ಒಳಗೊಂಡ ತಂಡವೊಂದನ್ನು ರಚಿಸಿದ್ದಾರೆ. ಈ ತಂಡದಲ್ಲಿ ಜಿಲ್ಲೆಯವರು, ಹೊರ ಜಿಲ್ಲೆ, ನಗರ ಪ್ರದೇಶ ಹಾಗೂ ವಿದೇಶಗಳಲ್ಲಿ ನೆಲೆಸಿರುವವರು ಇದ್ದು, ಭವಿಷ್ಯದ ಹಿತಚಿಂತನೆಯೊಂದಿಗೆ ಜಿಲ್ಲೆಯ ಪರವಾಗಿ ಕೆಲಸ ನಿರ್ವಹಿಸಲು ಮುಂದಾಗಿದ್ದಾರೆ. ಸದ್ಯದ ಮಟ್ಟಿಗೆ ತುರ್ತಾಗಿ ಈ ಬಾರಿ ದುರಂತದಲ್ಲಿ ನೊಂದವರಿಗೆ ಸ್ಪಂದನೆ ನೀಡಲು ಈ ತಂಡದ ಸ್ವಯಂ ಸೇವಕರು ಯಾವದೇ ಪ್ರಚಾರ ಬಯಸದೆ ಕಾರ್ಯೋನ್ಮುಖರಾಗಿದ್ದು, ಹಲವಷ್ಟು ಮಂದಿಗೆ ನೆರವು ನೀಡಿದ್ದಾರೆ.

-ವಾಸು