ಮಡಿಕೇರಿ, ಸೆ. 9: ಇತ್ತೀಚೆಗೆ ಚೆನ್ನೈಯಲ್ಲಿ ನಡೆದ ಜಿ.ವಿ. ಮಾವಲಂಕರ್ ರಾಷ್ಟ್ರೀಯ ಯುವ ಶೂಟಿಂಗ್ ಚಾಂಪಿಯನ್ ಶಿಪ್ ಆಯಾ ಸ್ಪರ್ಧೆಯಲ್ಲಿ ಅಳಮೇಂಗಡ ತರಾನ ರಮೇಶ್ ಐದನೇ ಸ್ಥಾನ ಗಳಿಸಿದ್ದಾಳೆ.
ಗೋಣಿಕೊಪ್ಪಲು ಕಾಲ್ಸ್ ಶಾಲೆಯಿಂದ ಅಶ್ವಿನಿ ಸ್ಪೋಟ್ರ್ಸ್ ಫೌಂಡೇಶನ್ ಮೂಲಕ ಆರು ವಿದ್ಯಾರ್ಥಿಗಳು ಶೂಟಿಂಗ್ ಸ್ಪರ್ಧೆಗೆ ತೆರಳಿದ್ದರು. ತರಾನ ರಮೇಶ್ 389 ಅಂಕ, ಸೋನಿಕ ಎಂ 381, ಅದ್ವಿಕಾ ನಯನ 378, ರಿಯಾ ಅಮಿತ್ ಪಾಟೀಲ್ 371, ವಿತನ್ ಬೆಳ್ಯಪ್ಪ 377 ಮತ್ತು ಜಸ್ಟಿನ್ ಅಂತೋಣಿ 367 ಅಂಕ ಗಳಿಸಿ ಎಲ್ಲರೂ ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.