ಮಡಿಕೇರಿ, ಸೆ. 9: ಇಲ್ಲಿಗೆ ಸಮೀಪದ ಹೆಬ್ಬೆಟ್ಟಗೇರಿಯ ಕೆರೆಮೊಟ್ಟೆ ನಿವಾಸಿ ಎ. ಜಯಲಕ್ಷ್ಮೀ ಪೂವಯ್ಯ ಎಂಬ ಸಂತ್ರಸ್ತೆಯ ಕುಟುಂಬಕ್ಕೆ ಹಾಸನ ಕಾರೆಕೆರೆ ಕೃಷಿ ವಿದ್ಯಾಲಯದ ವಿದ್ಯಾರ್ಥಿಗಳು ರೂ. 20 ಸಾವಿರ ಒಗ್ಗೂಡಿಸಿ ಸಹಾಯ ಹಸ್ತ ನೀಡಿದ್ದಾರೆ.
ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡಿರುವ ಈ ಕುಟುಂಬಕ್ಕೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕೂಡ ದಾನಿಗಳಿಂದ ರೂ. ಒಂದು ಲಕ್ಷ ಧನಸಹಾಯ ಒದಗಿಸಿಕೊಟ್ಟಿದ್ದಾರೆ. ಅಲ್ಲದೆ ಚೆರಿಯಮನೆ ತಮ್ಮಯ್ಯ ಹಾಗೂ ಉಮೇಶ್ ಎಂಬವರ ಮನೆಗಳಿಗೂ ಹಾನಿಯಾಗಿದ್ದು, ಶಾಸಕರು ಸಹಾಯ ಹಸ್ತ ಕಲ್ಪಿಸಿದ್ದಾರೆ.