ಗೋಣಿಕೊಪ್ಪ ವರದಿ, ಸೆ. 9: ಪೊನ್ನಂಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಪೊನ್ನಂಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಹಳೆ ವಿದ್ಯಾಥಿಗಳ ಸಂಘದ ವತಿಯಿಂದ ಶಿಕ್ಷಣ ಪ್ರೇಮಿ ಹಾಗೂ ಸಮಾಜ ಸೇವಕ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರ ಜೀವನ ಚರಿತ್ರೆಯ ‘ಜೀವನ ಸಮರ’ ಪುಸ್ತಕವನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕಾಕಮಾಡ ಚೆಂಗಪ್ಪ, ಲೇಖಕ ಮುಡಿಗುಂಡ ಗಣೇಶ್, ಪುಸ್ತಕ ಪ್ರಕಾಶಕ ಸುಬ್ರಮಣ್ಯ, ಹಿರಿಯರುಗಳಾದ ಚೆಪ್ಪುಡೀರ ಪೊನ್ನಪ್ಪ, ಅಜ್ಜಿನಿಕಂಡ ಭೀಮಯ್ಯ, ಡಾ. ಕಾಳಿಮಾಡ ಶಿವಪ್ಪ, ಡಾ. ಚಂದ್ರಶೇಖರ್, ಇಟ್ಟಿರ ಕೆ. ಬಿದ್ದಪ್ಪ ಇವರುಗಳು ಬಿಡುಗಡೆಗೊಳಿಸಿದರು.
ಈ ಸಂದರ್ಭ ಲೇಖಕ ಮುಡಿಗುಂಡ ಗಣೇಶ್, ಪುಸ್ತಕ ಪ್ರಕಾಶಕ ಸುಬ್ರಮಣ್ಯ, ಸಮಾಜ ಸೇವಕರುಗಳಾದ ಚೆಪ್ಪುಡೀರ ಪೊನ್ನಪ್ಪ ಹಾಗೂ ಅಜ್ಜಿನಿಕಂಡ ಭೀಮಯ್ಯ ಅವರುಗಳನ್ನು ಸನ್ಮಾನಿಸಲಾಯಿತು.
ಲೇಖಕ ಮುಡಿಗುಂಡ ಗಣೇಶ್ ಹಾಗೂ ಪುಸ್ತಕ ಪ್ರಕಾಶಕ ಸುಬ್ರಮಣ್ಯ ಇವರುಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಜಿಮ್ಮಿ ಅಣ್ಣಯ್ಯ ಅವರು ಜೀವನದಲ್ಲಿ ಸರಳ ವ್ಯಕ್ತಿಯಾಗಿ ಸಾರ್ವಜನಿಕರೊಂದಿಗೆ ಬೆರೆತು ಸಮಾಜಕ್ಕೆ ನೀಡಿದ ಕಾರ್ಯಗಳ ಸುಮಾರು 200 ಚಟುವಟಿಕೆಗಳನ್ನು ಪುಸ್ತಕದಲ್ಲಿ ನೀಡಲಾಗಿದೆ. ಇವರ ಮತ್ತಷ್ಟು ಕಾರ್ಯಗಳನ್ನು ಸಮಾಜಕ್ಕೆ ಒದಗಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಒಂದನೇ ಭಾಗವನ್ನು ಮಾತ್ರ ಹೊರತರಲಾಗಿದೆ. ಮುಂದಿನ ದಿನಗಳಲ್ಲಿ ಇವರ ಜೀವನ ಚರಿತ್ರೆಯ ಮತ್ತೊಂದು ಭಾಗ ಹೊರಬರುವಂತಾಗಬೇಕು ಎಂದರು. ಅಪ್ಪಚ್ಚಕವಿ ಹಾಗೂ ಬೆಕ್ಕೆಸೊಡ್ಲೂರು ಶಾಲಾ ವಿದ್ಯಾರ್ಥಿಗಳು ಬ್ಯಾಂಡ್ ಮೂಲಕ ಮೆರವಣಿಗೆಯಲ್ಲಿ ಅತಿಥಿಗಳನ್ನು ಸ್ವಾಗತಿಸಿಕೊಂಡರು. ಮಹೇಶ್ ನಿರೂಪಿಸಿದರು. ರೋಜಿ ಸ್ವಾಗತಿಸಿದರು. - ಸುದ್ದಿಪುತ್ರ