ಚೆಟ್ಟಳ್ಳಿ, ಸೆ. 10: ಹಾನಿಗೀಡಾಗಿ ರುವ ಆನೆಕಂದಕವನ್ನು ದುರಸ್ತಿ ಪಡಿಸುವ ಕಾಮಗಾರಿ ಮುಂದುವರಿಸ ಲಾಗುವದು. ಇದಾದ ಬಳಿಕ ಸೋಲಾರ್ ಬೇಲಿ ಅಳವಡಿಸುವ ದಾಗಿ ಅರಣ್ಯ ಇಲಾಖಾಧಿಕಾರಿಗಳು ಚೆಟ್ಟಳ್ಳಿ ವಿಭಾಗದ ನಾಗರಿಕರಿಗೆ ಭರವಸೆ ನೀಡಿದ್ದಾರೆ.
ಸಮೀಪದ ಮೀನುಕೊಲ್ಲಿ ಅರಣ್ಯದಿಂದ ಮುಖ್ಯ ರಸ್ತೆಗಾಗಿ ದಾಟುವ ಆನೆ ಕಂದಕವನ್ನು ಸರಿಪಡಿಸುವಂತೆ ಮಡಿಕೇರಿಯ ಅರಣ್ಯ ಭವನಕ್ಕೆ ತೆರಳಿದ್ದ ನಾಗರಿಕರು ಡಿಎಫ್‍ಓ ಮಂಜುನಾಥ್ ಅವರನ್ನು ಒತ್ತಾಯಿಸಿದ್ದರು. ಆನೆಗಳ ತಿರುಗಾಟ ಅಧಿಕವಾಗಿದ್ದು, ಜನತೆ ಆತಂಕ ಎದುರಿಸುವಂತಾಗಿದೆ. ಅಲ್ಲದೆ ಪ್ರಕೃತಿ ವಿಕೋಪದಿಂದ ಕೃಷಿ ಫಸಲುಗಳು ಹಾನಿಗೀಡಾಗಿದ್ದು, ಉಳಿದಿರುವ ಅಲ್ಪಸ್ವಲ್ಪ ಫಸಲುಗಳೂ ಸಿಗದಂತಾಗುತ್ತಿವೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿ ದ್ದರು. ಇದರಂತೆ ಹಿರಿಯ ಅಧಿಕಾರಿಯ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿದ ವಲಯ ಅರಣ್ಯಾಧಿಕಾರಿ ಅರುಣ್, ಉಪ ವಲಯ ಅರಣ್ಯಾಧಿಕಾರಿ ವಿಲಾಸ್‍ಗೌಡ ಅವರುಗಳು ಸ್ಥಳ ಪರಿಶೀಲಿಸಿ ಸಾರ್ವಜನಿಕರಿಗೆ ಈ ಬಗ್ಗೆ ಕ್ರಮಕೈಗೊಳ್ಳುವ ಭರವಸೆ ನೀಡಿದರು.ಗ್ರಾಮಸ್ಥರಾದ ಪೇರಿಯನ ಉದಯ, ಪೂಣಚ್ಚ, ಪ್ರಕಾಶ್, ಸಿದ್ದಿಕಲ್, ದಿನೇಶ್‍ಕುಮಾರ್, ಅರುಣ್ ಕುಮಾರ್, ದೇವರಾಜು, ಸೋಮೆಯಂಡ ಸುಮತಿ ಸುಬ್ಬಯ್ಯ, ಕೊಂಗೇಟಿರ ಶಾವನ್ ಕಾರ್ಯಪ್ಪ ಮತ್ತಿತರರು ಸಮಸ್ಯೆಗಳ ಬಗ್ಗೆ ವಿವರಿಸಿದರು. ಈ ಸಂದರ್ಭ ಇಲಾಖಾ ಸಿಬ್ಬಂದಿಗಳಾದ ಹನುಮಂತಪ್ಪ, ರಾಯಪ್ಪ, ಮಣಿಕಂಠ, ವಿಜಯಕುಮಾರ್, ಬಾಜಿ ಆಲ್ಬರ್ಟ್, ಅಪ್ಪಸ್ವಾಮಿ, ಜಗ್ಗ, ಧರ್ಮಪಾಲ್, ಆಶಿಕ್ ಗೌಡ, ಕಿರಣ್, ಸುಬ್ರಮಣಿ ಹಾಜರಿದ್ದರು.