ಮಡಿಕೇರಿ, ಸೆ. 10: ಪ್ರಕೃತಿ ವಿಕೋಪದಡಿ ಮನೆ, ತೋಟ, ಗದ್ದೆಗಳನ್ನು ಕಳೆದುಕೊಂಡು ಸಂತ್ರಸ್ತರಾದವರಿಗೆ ಪುನರ್‍ವಸತಿಯೊಂದಿಗೆ ಸೂಕ್ತ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಲಾಗುವದು, ಕೊಡಗಿನ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಬಳಿ ತೆರಳಿ ಮನವರಿಕೆ ಮಾಡುವದರೊಂದಿಗೆ ಬ್ಯಾಂಕ್ ಹಾಗೂ ಸಂಘ- ಸಂಸ್ಥೆಗಳಲ್ಲಿರುವ ಸಂತ್ರಸ್ತರ ಸಾಲಮನ್ನಾ ಮಾಡುವ ಸಂಬಂಧ ಗಮನ ಸೆಳೆಯಲಾಗುವದೆಂದು ಅಪ್ಪಚ್ಚು ರಂಜನ್ ಹಾಗೂ ವೀಣಾ ಅಚ್ಚಯ್ಯ ಅವರುಗಳು ಸಂತ್ರಸ್ತರಿಗೆ ಅಭಯ ನೀಡಿದರು.ಪ್ರಕೃತಿ ವಿಕೋಪಕ್ಕೆ ತುತ್ತಾದ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶೇಷ ಗ್ರಾಮಸಭೆ ಇಂದು ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸಂತ್ರಸ್ತರ ಅಹವಾಲು, ಸಮಸ್ಯೆ ಆಲಿಸಿದ ಬಳಿಕ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್ ಅವರು ದುರಂತದಲ್ಲಿ ಮನೆಗಳನ್ನು ಕಳೆದುಕೊಂಡಿರುವವರನ್ನು ಸಮಗ್ರವಾಗಿ ಪರಿಶೀಲಿಸಿ ವರದಿ ತಯಾರಿಸಬೇಕು. ಹಾನಿಗೊಳಗಾಗಿ ವಾಸ ಮಾಡಲು ಸಾಧ್ಯವಿಲ್ಲದಿರುವಂತಹ ಮನೆಗಳನ್ನು ಸಂಪೂರ್ಣ ಹಾನಿ ಎಂದು ಪರಿಗಣಿಸಿ, ಪುನರ್‍ವಸತಿ ಇಲ್ಲವೆ, ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸಿದರಲ್ಲದೆ, ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಪಂಚಾಯಿತಿಗೆ ತೆರಳಿ ಅರ್ಜಿ ಸಲ್ಲಿಸುವಂತೆ ಸಂತ್ರಸ್ತರಿಗೆ ಹೇಳಿದರು. ಈಗಾಗಲೇ ಮಾದಾಪುರ, ಕರ್ಣಂಗೇರಿ, ಬಿಳಿಗೇರಿ, ಕೆ.ನಿಡುಗಣೆ, ಗಾಳಿಬೀಡು, ಸಂಪಾಜೆ ಮುಂತಾದೆಡೆ ಜಾಗ ಗುರುತಿಸಲಾಗಿದೆ. ರೂ. 10 ಲಕ್ಷ ವೆಚ್ಚದಲ್ಲಿ ಸಮರ್ಪಕವಾದ ಮನೆ ನಿರ್ಮಿಸಿಕೊಡಲಾಗುವದು. ಅಥವಾ ಸಂತ್ರಸ್ತರಿಗೆ ಮನೆಕಟ್ಟಲು ನಿವೇಶನವಿದ್ದಲ್ಲಿ

(ಮೊದಲ ಪುಟದಿಂದ) ಸೂಕ್ತ ಮೊತ್ತದ ಪರಿಹಾರ ನೀಡಲಾಗುವದು. ಅಧಿಕಾರಿಗಳು ಯಾವದೇ ಮುಲಾ ಜಿಲ್ಲದೆ ಸರಿಯಾದ ವರದಿ ತಯಾರಿಸಬೇಕಿದೆ ಎಂದು ಹೇಳಿದರು.

ಎಲ್ಲರೂ ನೊಂದಿದ್ದು, ಪರಿಹಾರೋಪಾಯ ಕಾರ್ಯದಲ್ಲಿ ಯಾವದೇ ಜಾತಿ, ರಾಜಕೀಯ ಇಲ್ಲ, ದುರಂತ ನಡೆದ ಸಂದರ್ಭ ಎಲ್ಲರೂ ಸ್ಪಂದಿಸಿ, ರಕ್ಷಣೆ ಮಾಡಿದ್ದಾರೆ ಎಂದರು. ಈಗಾಗಲೇ ರಾಷ್ಟ್ರೀಯ ಬ್ಯಾಂಕ್‍ಗಳ ಸಭೆ ನಡೆಸಿ, ಬ್ಯಾಂಕ್‍ಗಳಲ್ಲಿರುವ ರೂ. 1400 ಕೋಟಿ ಸಾಲ ಮನ್ನಾ ಮಾಡುವಂತೆ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಲಾಗಿದೆ. ಸ್ವಸಹಾಯ ಸಂಘಗಳ ಸಾಲ ಮನ್ನಾಕ್ಕೂ ಪ್ರಯತ್ನಿಸಲಾಗುವದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವದೆಂದು ಹೇಳಿದರು.

ಜಿಲ್ಲೆಯ ಸಂತ್ರಸ್ತರಿಗೆ ಜಿಲ್ಲೆಯಲ್ಲಿ ಸಂತ್ರಸ್ತರ ನಿಧಿ ಸ್ಥಾಪನೆ ಮಾಡಿ, ಕೊಡಗು ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಾವೇರಿ ನೀರಾವರಿ ನಿಗಮದಿಂದಲೂ ಪ್ರತಿ ವರ್ಷ 100 ಕೋಟಿ ಅನುದಾನ ಒದಗಿಸಲು ಈಗಾಗಲೇ ಕೋರಲಾಗಿದೆ. ಗ್ರಾಮದ ಎಲ್ಲರಿಗೂ ಬಿಪಿಎಲ್ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗುವದು. ಮಕ್ಕಂದೂರಿಗೆ ನ್ಯಾಯಬೆಲೆ ಅಂಗಡಿ ಒದಗಿಸಲಾಗುವದೆಂದು ಹೇಳಿದರಲ್ಲದೆ, ಸ್ಥಳದಲ್ಲಿದ್ದ ತಹಶೀಲ್ದಾರ್ ಕುಸುಮ ಅವರಿಗೆ ಅಂಗಡಿಯೊಂದಿಗೆ ಮುಕ್ಕೋಡ್ಲುವಿನಲ್ಲೂ ಒಂದು ಕೇಂದ್ರ ತೆರೆಯುವಂತೆ ಸೂಚಿಸಿದರು. ಕಾಫಿ ಬೆಳೆ ನಾಶಕ್ಕೆ ಮಂಡಳಿಯಿಂದ ಅತ್ಯಲ್ಪ ಪರಿಹಾರ ಸಿಗುತ್ತಿದೆ. ಹೆಚ್ಚಿಗೆ ಪರಿಹಾರಕ್ಕಾಗಿ ಹಣ ಬಿಡುಗಡೆಗೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವದೆಂದು ಹೇಳಿದರು.

ಸಿ.ಎಂ. ಬಳಿ ನಿಯೋಗ

ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಸರಕಾರದ ಜಾಗ ಗುರುತಿಸಿ, ನಿರಾಶ್ರಿತರಿಗೆ ಸೂರು ಒದಗಿಸಲಾಗುವದು, ರಸ್ತೆ ದುರಸ್ತಿಕಾರ್ಯ ಆಗುತ್ತಿದೆ. ಯಾರೂ ಕೂಡ ಧೈರ್ಯಗುಂದಬಾರದು. ಸರಕಾರ ನಿಮ್ಮೊಂದಿಗಿದೆ ಎಂದು ಹೇಳಿದರು.

ಬಹುತೇಕ ಅಧಿಕಾರಿಗಳಿಗೆ ಜಿಲ್ಲೆಯ ಸಮಸ್ಯೆ ಬಗ್ಗೆ ಅರಿವಿಲ್ಲ. ಹಾಗಾಗಿ ಜನಪ್ರತಿನಿಧಿಗಳೆಲ್ಲ ಪಕ್ಷ ಭೇದ ಮರೆತು ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಜನತೆಯ ಸಂಕಷ್ಟ ವಿವರಿಸಿ, ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಲಾಗುವದೆಂದು ಹೇಳಿದರು. ಜನಪ್ರತಿನಿಧಿಗಳಾಗಿ ನಾವುಗಳು ಯಾವದೇ ಸಂದರ್ಭದಲ್ಲೂ ನೆರವಿಗೆ ಸಿದ್ಧರಿರುವದಾಗಿ ಹೇಳಿದರು.

ಗ್ರಾಮ ಬಿಟ್ಟು ಹೋಗಬೇಡಿ

ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಮಾತನಾಡಿ, ನಷ್ಟಕ್ಕೊಳಗಾದವರಿಗೆ ಹೊಸಮನೆ, ನಿವೇಶನ ನೀಡಲಾಗು ವದು. ಸಾಲ ಮನ್ನಾಗೆ ಆಗ್ರಹಿಸಲಾಗು ವದು. ಈಗಾಗಲೇ ಜಾಗ ಗುರುತಿಸಲಾಗಿದೆ. ಯಾರೂ ಕೂಡ ಗ್ರಾಮ ಬಿಟ್ಟು ಬೇರೆಡೆಗೆ ಹೋಗಬಾರ ದೆಂದು ಮನವಿ ಮಾಡಿದರು.

ಜಿ.ಪಂ. ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಮಾತನಾಡಿ, ದುರಂತ ಸಂಭವಿಸಿದ ಬಳಿಕ ದೃಶ್ಯ ಮಾಧ್ಯಮ ಗಳಲ್ಲಿ ಇಡೀ ಜನತೆಯನ್ನೇ ಗಾಬರಿಗೊಳಿಸುವಂತಹ ವರದಿ ಯಾಗುತ್ತಿತ್ತು. ಇದರಿಂದಾಗಿ ರಾಜ್ಯ ದಾದ್ಯಂತ ಸಾಮಗ್ರಿಗಳು ಹರಿದುಬಂದಿದ್ದು, ನೈಜ ಸಂತ್ರಸ್ತರಿಗೆ ತಲಪಲಿಲ್ಲ. ಇದು ನಮ್ಮ ನೋವು, ನಮ್ಮ ಹೆಸರಲ್ಲಿ ಯಾರೂ ಬೇಕಾದರೂ ತಿನ್ನಲಿ ಆದರೆ, ಸಂತ್ರಸ್ತರ ಪುನ ರೋತ್ತಾನಕ್ಕೆ ಕೈಜೋಡಿಸುವ ಕೆಲಸ ಮಾಡಲಿ ಎಂದು ಹೇಳಿದರು. ಬಹುತೇಕ ಜಿಲ್ಲೆಯ ಸಂಸ್ಕøತಿ ಉಳಿದಿರುವದು ಈ ಭಾಗದಲ್ಲಿ ಮಾತ್ರ. ಯಾರೂ ಊರು ಬಿಟ್ಟು ಹೋಗಲು ತಯಾರಿಲ್ಲ. ಇಲ್ಲಿಯೇ ನೀರು, ರಸ್ತೆ, ವ್ಯವಸ್ಥೆ ಕಲ್ಪಿಸಿ, ಮರು ಪುನಶ್ಚೇತನ ವ್ಯವಸ್ಥೆಯಾಗಬೇಕು. ಸರಕಾರ ವಿಶೇಷ ಅನುದಾನ ನೀಡಬೇಕು. ಸಿ ಮತ್ತು ಡಿ ಜಾಗವನ್ನು ವಶಕ್ಕೆ ಪಡೆದು ಜಾಗ ಕಳೆದುಕೊಂಡವರಿಗೆ ಹಂಚಬೇಕು. ಈ ನಿಟ್ಟಿನಲ್ಲಿ ಹೋರಾಟ ಮಾಡೋಣ ಎಂದು ಹೇಳಿದರು.

ವಿ.ಎಸ್.ಎಸ್.ಎನ್. ಅಧ್ಯಕ್ಷ ಸುಜು ತಿಮ್ಮಯ್ಯ ಮಾತನಾಡಿ, ದುರಂತ ಸಂಭವಿಸಿದ ಸಂದರ್ಭ ಇಲ್ಲಿಯೇ ಸಂತ್ರಸ್ತರಿಗೆ ವ್ಯವಸ್ಥೆ ಮಾಡಿದ್ದೆವು. ಆದರೆ ಜಿಲ್ಲಾಡಳಿತ ಸುರಕ್ಷತೆ ದೃಷ್ಟಿಯಿಂದ ಮಡಿಕೇರಿ ಸ್ಥಳಾಂತರ ಮಾಡಿದ್ದು, ಇನ್ನೂ ಕೂಡ ಇಲ್ಲಿಗೆ ಬರುವದಾದರೆ ಪರಿಹಾರ ಕೇಂದ್ರಕ್ಕಾಗಿ ಸಭಾಂಗಣ ಬಿಟ್ಟುಕೊಡ ಲಾಗುವದೆಂದರು.

ಸುಂಟಿಕೊಪ್ಪ ವೀರಾಜಪೇಟೆಯಲ್ಲಿ ಸರ್ವೆ

ಇದೇ ಸಂದರ್ಭ ಸಂತ್ರಸ್ತರಾದ ವರಿಗೆ ಸರಕಾರದಿಂದ ನೀಡಲಾಗುವ ತುರ್ತು ಪರಿಹಾರ ರೂ. 3800 ಹಣ ಯಾರಿಗೂ ತಲಪದಿರುವ ಬಗ್ಗೆ, ವಾಸಕ್ಕೆ ಯೋಗ್ಯವಲ್ಲದ ಮನೆಗಳನ್ನು ಸಂಪೂರ್ಣ ಹಾನಿಯೆಂದು ಪರಿಗಣಿಸುವ ಬಗ್ಗೆ, ಕುಶಾಲನಗರ ಪರಿಹಾರ ಕೇಂದ್ರದಿಂದ ಇಲ್ಲಿಗೆ ಕರೆಸಿಕೊಳ್ಳುವ ಬಗ್ಗೆ ಹಾಗೂ ಕಾಫಿ ಮಂಡಳಿ ಅಧಿಕಾರಿಗಳು ಅಸಮರ್ಪಕ ವಾಗಿ ಸರ್ವೆ ಕಾರ್ಯ ನಡೆಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದರು. ಈ ಸಂದರ್ಭ ಸಭೆಗೆ ಆಗಮಿಸಿದ ಕಾಫಿ ಮಂಡಳಿ ಅಧಿಕಾರಿಗಳಲ್ಲಿ ಮಾಹಿತಿ ಬಯಸಿದಾಗ ಅಧಿಕಾರಿ ತಾವು ಶಾಂತಳ್ಳಿ, ಸುಂಟಿಕೊಪ್ಪ, ವೀರಾಜಪೇಟೆ ಕಡೆಗಳಲ್ಲಿ ಸರ್ವೆ ನಡೆಸಿರುವದಾಗಿ ಹೇಳಿದಾಗ, ಆಕ್ರೋಶಿತರಾದ ಸಂತ್ರಸ್ತರು ಮಕ್ಕಂದೂರು ವ್ಯಾಪ್ತಿಯ ಬಗ್ಗೆ ಮಾಹಿತಿ ಬಯಸಿದರು. ಈ ಸಂದರ್ಭ ಮಕ್ಕಂದೂರು ವಿಭಾಗಕ್ಕೆ ಬೇರೆ ಅಧಿಕಾರಿ ನಿಯೋಜಿಸಿರುವದಾಗಿ ಹೇಳಿದಾಗ, ಮತ್ತೊಮ್ಮೆ ಜನತೆಗೆ ಮಾಹಿತಿ ನೀಡಿ ಸರ್ವೆ ಮಾಡುವಂತೆ ಆಗ್ರಹಿಸಿದರು. ಮಧ್ಯಪ್ರವೇಶಿಸಿದ ಶಾಸಕರು ಅಧಿಕಾರಿಗಳು ಗ್ರಾಮಕ್ಕೆ ಬರುವ ಬಗ್ಗೆ ಅಭಿವೃದ್ಧಿ ಅಧಿಕಾರಿ, ಆಕಾಶವಾಣಿ ಹಾಗೂ ಶಕ್ತಿ ಪತ್ರಿಕೆಗೆ ಮಾಹಿತಿ ರವಾನಿಸಿ, ಸರಿಯಾದ ರೀತಿಯಲ್ಲಿ ಸರ್ವೆ ಮಾಡುವಂತೆ ಸೂಚಿಸಿದರು.

ವೀಕ್ಷಕರಿಗೆ ನಿಷೇಧ

ಹೆÉಮ್ಮೆತ್ತಾಳು ಗ್ರಾಮಕ್ಕೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸುತ್ತಿದ್ದು, ರಸ್ತೆ ಹಾಳಾಗು ವದರೊಂದಿಗೆ ಬದುಕು ಕಟ್ಟಿ ಕೊಳ್ಳುತ್ತಿರುವ ಸಂತ್ರಸ್ತರಿಗೆ ತೊಂದರೆ ಆಗುತ್ತಿರುವ ಬಗ್ಗೆ ಸಂತ್ರಸ್ತರು ಸಭೆಯ ಗಮನಕ್ಕೆ ತಂದಾಗ ಶಾಸಕ ರಂಜ್ ಅವರು ಸ್ಥಳದಲ್ಲಿ ಪೊಲೀಸರ ನಿಯೋಜನೆಯೊಂದಿಗೆ ವೀಕ್ಷಕರಿಗೆ ತೆರಳಲು ಅವಕಾಶ ನೀಡದಿರಲು

ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಸ್ಥಳೀಯರು ಹಾಗೂ ಸಂತ್ರಸ್ತರಿಗೆ ನೆರವು ನೀಡಲು ಬರುವವರಿಗೆ ಗುರುತಿನ ಚೀಟಿ ಇರುವವರಿಗೆ ಮಾತ್ರ ಅವಕಾಶ ನೀಡುವಂತೆ ಸಂತ್ರಸ್ತರು ಕೋರಿ ಕೊಂಡರು. ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿ.ಪಂ. ಸದಸ್ಯೆ ಯಾಲದಾಳು ಪದ್ಮಾವತಿ, ಗ್ರಾ.ಪಂ. ಅಧ್ಯಕ್ಷೆ ಲಕ್ಕಪ್ಪನ ಕಾವೇರಮ್ಮ, ತಾ.ಪಂ. ಸದಸ್ಯ ರಾಯ್ ತಮ್ಮಯ್ಯ, ಗ್ರಾ.ಪಂ. ಉಪಾಧ್ಯಕ್ಷ ಶ್ಯಾಂ ಸುಬ್ಬಯ್ಯ, ಸದಸ್ಯೆ ವಿಮಲ ರವಿ, ರತಿ, ಕಂದಾಯಾಧಿ ಕಾರಿಗಳು, ಇಂಜಿನಿ ಯರ್‍ಗಳಿದ್ದರು. ಸದಸ್ಯ ಬಿ.ಎನ್. ರಮೇಶ್ ನಿರೂಪಿಸಿದರೆ, ಅಣ್ಣಚ್ಚಿರ ಸತೀಶ್ ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿ ಚಂಗಪ್ಪ ಸಂತ್ರಸ್ತರ ಪಟ್ಟಿ ಓದಿದರು. ಇದೇ ಸಂದರ್ಭ ಕಂದಾಯ ಇಲಾಖೆಯಿಂದ ಸಂಪೂರ್ಣ ಮನೆ ಕಳೆದುಕೊಂಡ ವರಿಗೆ 1,01,900 ಮೊತ್ತದ ಚೆಕ್ ವಿತರಿಸಲಾಯಿತು.