ಸುಂಟಿಕೊಪ್ಪ, ಸೆ. 10 : ಅತಿವೃಷ್ಠಿಯಿಂದ ತೊಂದರೆಗೊಳ ಗಾಗಿರುವ ಕಾರ್ಮಿಕರನ್ನು ಬಡ ರೈತರನ್ನು ಮೂಲವಾಗಿರಿಸಿಕೊಂಡು ಕುಟುಂಬದ ಸದಸ್ಯರಿಗೆ ಅಮಿಷ ಗಳನ್ನು ತೋರಿಸುವ ಮೂಲಕ ಗೋಣಿಕೊಪ್ಪದಲ್ಲಿ ಕ್ರೈಸ್ತಮಿಷನರಿ ಗಳು ಮತಾಂತರ ಮಾಡುತ್ತಿರು ವುದು ಖಂಡನೀಯ.
ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕಿನಲ್ಲಿ ಬಹಳ ಜನ ನಿರಾಶ್ರಿತರು ಮನೆ ಕಳೆದು ಕೊಂಡು ಬೀದಿಪಾಲಾಗಿದ್ದಾರೆ. ಇವರನ್ನು ಗುರಿಯಾಗಿಸಿ ಕೊಂಡು ಅವರಿಗೆ ಇಲ್ಲದ ಅಮಿಷಗಳನ್ನು ತೋರಿಸುವ ಮೂಲಕ ಮತಾಂತರ ಮಾಡುವವರ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಈ ಭಾಗದಲ್ಲಿ ನೆಮ್ಮದಿಯ ಜೀವನ ನಡೆಸುತಿರುವವರ ಮಧ್ಯೆ ಕೋಮು ಬಾವನೆ ಉದ್ಭವಿಸಲು ಪ್ರಯತ್ನ ನಡೆಸುವವರನ್ನು ಬಂಧಿಸಿ ಶಿಕ್ಷೆ ನೀಡಬೇಕು ಎಂದು ಸುಂಟಿಕೊಪ್ಪ ನಗರ ಬಿಜೆಪಿ ಮಾಜಿ ಅಧ್ಯಕ್ಷ ಬಿ. ಕೆ. ಮೋಹನ, ಯುವ ಮೋರ್ಚಾ ತಾಲೂಕು ಸಮಿತಿ ಸದಸ್ಯ ಅಶೋಕ್, ಮೊಳೂರು ವಿಜಯ, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಸದಸ್ಯ ಅಂಬೆಕಲ್ ಚಂದ್ರ ಮೊದಲಾದವರು ಆಗ್ರಹಿಸಿದ್ದಾರೆ