ಸುಂಟಿಕೊಪ್ಪ, ಸೆ. 10: ಮಾತೆ ಮರಿಯಮ್ಮ ಅವರ ಜನ್ಮದಿನ ಹಾಗೂ ಹೊಸ ತೆನೆಯ ಹಬ್ಬವನ್ನು ಸಂತ ಅಂತೋಣಿ ದೇವಾಲಯದಲ್ಲಿ ಕ್ರೈಸ್ತ ಬಾಂಧವರು ಶೃದ್ಧಾ ಭಕ್ತಿಯಿಂದ ಆಚರಿಸಿದರು.

ಮಾತೆ ಮರಿಯಮ್ಮ ಹಬ್ಬದ ಅಂಗವಾಗಿ ವಿಶೇಷ ಗಾಯನ ಬಲಿಪೂಜೆಯನ್ನು ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಎಡ್ವರ್ಡ್ ವಿಲಿಯಂ ಸಲ್ಡಾನ ಅವರು ಸಮರ್ಪಿಸಿ ಮೊಹಂತಿ ಹಬ್ಬದ ಅಂಗವಾಗಿ ನೂತನ ಭತ್ತದ ತೆನೆಯನ್ನು ತಂದು ದೇವಾಲಯದಲ್ಲಿ ಕ್ರೈಸ್ತ ಬಾಂಧÀವರಿಗೂ ವಿತರಿಸಿದರು.