ಗೋಣಿಕೊಪ್ಪ ಸೆ. 10 : ಯುನೈಟೆಡ್ ಕಿಂಗ್‍ಡಮ್‍ನಲ್ಲಿ ನೆಲೆಸಿರುವ ಕೊಡಗಿನವರನ್ನು ಒಂದುಗೂಡಿಸಿ ಒಗ್ಗಟ್ಟು ಕಾಪಾಡಿಕೊಳ್ಳುವ ಉದ್ದೇಶ ದಿಂದ ಆರಂಭವಾದ ಯುಕೆ ಕೊಡಗು ಅಸೋಸಿಯೇಷನ್ ತನ್ನ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದ್ದು, ತಾ. 22 ರಂದು ಕಾರ್ಯಕ್ರಮ ಆಯೋಜಿಸುವ ಮೂಲಕ ಸಂಭ್ರಮಕ್ಕೆ ಮುಂದಾಗಿದೆ.
ಒಗ್ಗಟ್ಟಿನ ಮೂಲಕ ಪರಸ್ಪರ ಹೊಂದಾಣಿಕೆ ಬೆಳೆಸಲು, ಕೊಡಗಿನ ಸಂಸ್ಕøತಿ, ಆಚಾರ-ವಿಚಾರಗಳನ್ನು ಕಾಪಾಡಿಕೊಳ್ಳುವದು, ಯುವ ಪೀಳಿಗೆಗಳಿಗೆ ಕೊಡಗಿನ ಇತಿಹಾಸ, ಬಾಷೆ ಇಂತಹವುಗಳನ್ನು ಪೋಷಿಸಲು ಪ್ರೋತ್ಸಾಹ ನೀಡುವದು ಈ ಸಂಘಟನೆಯ ಮೂಲ ಉದ್ದೇಶವಾಗಿದೆ. ಇದರಂತೆ ಆರಂಭಗೊಂಡ ಸಂಘಟನೆ ಇದೀಗ ಬೆಳ್ಳಿ ಹಬ್ಬ ಸಂಭ್ರಮದಲ್ಲಿದೆ.
1993 ರಲ್ಲಿ ಅಲ್ಲಿ ನೆಲೆಸಿದ್ದ ಹಿರಿಯರ ಚಿಂತನೆಯಂತೆ ಆರಂಭವಾಯಿತು. ಅಲ್ಲಿ ನೆಲೆಸಿರುವ ಕೊಡಗಿನ ಎಲ್ಲಾ ನಿವಾಸಿಗಳನ್ನು ಒಂದುಗೂಡಿಸಿ ಸಂಘ ಕಟ್ಟಲಾಯಿತು. ಸದಸ್ಯತ್ವದ ಮೂಲಕ ಕೊಡಗಿನ ಪರಂಪರೆ, ಸಂಸ್ಕøತಿ ಇಂತವುಗಳ ರಕ್ಷಣೆ ಮಾಡುತ್ತಾ ಬಂದಿದೆ. ತಾ. 22 ರಂದು ಅಲ್ಲಿನ ಪಶ್ಚಿಮ ಮಿಡ್ಲೆಂಡಿನ ಡೆಡ್ಲಿ ಹಾಗೂ ಬಿರ್ಮಿಂಗ್‍ಹ್ಯಾಮ್‍ನಲ್ಲಿ ಹಬ್ಬ ಆಯೋಜನೆಗೊಂಡಿದೆ. ದೋಣಿ ವಿಹಾರದೊಂದಿಗೆ ಸಾಂಪ್ರದಾಯಿಕ, ಸಾಂಸ್ಕøತಿಕ ಕಾರ್ಯಕ್ರಮದ ಮೂಲಕ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದೆ.
ಇಲ್ಲಿವರೆಗೆ ಕೊಂಗಂಡ ತಿಮ್ಮಯ್ಯ ಕಾರ್ಯದರ್ಶಿಯಾಗಿ, ಬಲ್ಲಡಿಚಂಡ ತಿಮ್ಮಯ್ಯ ಖಜಾಂಜಿಯಾಗಿ, ವಾಟೇರಿರ ರಾಣಿ ಕುಶಾಲಪ್ಪ ನಿರ್ಗಮಿತ ಅಧ್ಯಕ್ಷರಾಗಿ, ಕುಂಬೇರ ಪ್ರಿಯಾ ಅಯ್ಯಪ್ಪ ಕಮಿಟಿ ಸದಸ್ಯರಾಗಿ ಹಾಗೂ ಹಲವರು ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಕೂತಂಡ ರಾಧಿಕ ಕಾಳಪ್ಪ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 100 ಕ್ಕೂ ಹೆಚ್ಚು ಸದಸ್ಯರು ಬೆಳ್ಳಿ ಸಂಭ್ರಮದಲ್ಲಿ ಪಾಲ್ಗೊಳ್ಳಲಿ ದ್ದಾರೆ. ಕಾರ್ಯಕ್ರಮಕ್ಕಾಗಿ ವಿಶೇಷ ಲಾಂಛನ ಬಿಡುಗಡೆಗೊಳಿಸಲಾಗಿದೆ. - ವರದಿ : ಸುದ್ದಿಪುತ್ರ