ಮಡಿಕೇರಿ, ಸೆ. 11: ಕೊಡಗಿನಲ್ಲಿ ಮಹಾ ಮಳೆಯಿಂದ ಶಾಲಾ, ಕಾಲೇಜುಗಳಿಗೆ ಅತಿ ಹೆಚ್ಚು ರಜೆ ಘೋಷಣೆಯಾಗಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಕಲಿಕೆಯಲ್ಲಿ ವ್ಯತ್ಯಾಸವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ವೀರಾಜಪೇಡೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶ್ರೀರಂಗಪಟ್ಟಣದ ಪರಿವರ್ತನಾ ಶಾಲೆ ಮತ್ತು ಕಾಲೇಜಿನ ಡೀನ್, ಅಂತರ್ರಾಷ್ಟ್ರೀಯ ತರಬೇತುದಾರ ಆರ್.ಎ. ಚೇತನ್, ರಾಮ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲು ಹಾಗೂ ಪರೀಕ್ಷೆ ಎದುರಿಸಲು ತಯಾರಿಯ ಬಗ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ವೀರಾಜಪೇಟೆಯ ಸಂತ ಅನ್ನಮ್ಮ ಶಾಲಾ ಸಭಾಂಗಣದಲ್ಲಿ ತಾ. 12 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

*ಪೊನ್ನಂಪೇಟೆ ನಿಸರ್ಗ ಜೆಸಿಐ ಹಾಗೂ ವೀರಾಜಪೇಟೆ ಕಾವೇರಿ ಪ.ಪೂ. ಕಾಲೇಜು ಸಹಯೋಗದೊಂದಿಗೆ ಮಧ್ಯಾಹ್ನ 1.30 ಗಂಟೆಗೆ ಕಾವೇರಿ ಕಾಲೇಜು ಸಭಾಂಗಣದಲ್ಲಿಯೂ ತರಬೇತಿ ಕಾರ್ಯಕ್ರಮ ನಡೆಯಲಿದೆ ಎಂದು ಕಸಾಪ ಪ್ರಕಟಣೆ ತಿಳಿಸಿದೆ.