*ಸುಂಟಿಕೊಪ್ಪ, ಸೆ. 14: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಮಾರುತಿ ಕಾರು ಹಾಗೂ ಪಿಕಪ್ ಜೀಪ್‍ಗಳಲ್ಲಿ ಅಕ್ರಮವಾಗಿ ರಾಜಾರೋಷವಾಗಿ ಬೀಟಿ, ಬಳಜಿ ಇನ್ನಿತರ ಬೆಲೆಬಾಳುವ ಮರಗಳನ್ನು ಸಾಗಾಟಗೊಳಿಸುತ್ತಿದ್ದ ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದು, ವಾಹನಗಳು ಅರಣ್ಯಾಧಿಕಾರಿಗಳ ವಶಕ್ಕೆ ಆರೋಪಿಗಳು ಪಡೆದಿದ್ದಾರೆ.

ಗಣೇಶ ಚತುರ್ಥಿ ದಿನದಂದು ಅರಣ್ಯ ಸಿಬ್ಬಂದಿಗಳು ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯಿತಿÀಯ ಗುಂಡುಗುಟ್ಟಿ ಬಸ್ ನಿಲ್ದಾಣದ ಸಮೀಪ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದರು; ಗುಂಡುಗುಟ್ಟಿ ಬಳಿ ಲೋಡ್ ತುಂಬಿದ ಪಿಕಅಪ್ ವಾಹನವನ್ನು (ಕೆಎ-12 ಎ-6442) ನಿಲ್ಲಿಸಲು ಸೂಚಿಸಿದಾಗ ಅರಣ್ಯ ಸಿಬ್ಬಂದಿಗಳನ್ನು ಕಂಡು ವಾಹನ ಚಾಲಕನು ವಾಹನವನ್ನು ರಸ್ತೆಯಲ್ಲಿ ಬಿಟ್ಟು ಸ್ಥಳದಿಂದ ಕಾಲು ಕಿತ್ತಿದ್ದಾನೆ. ಅರಣ್ಯ ಇಲಾಖೆ ಅಧಿಕಾರಿಗಳು ವಾಹನವನ್ನು ಪರಿಶೀಲಿಸಿದಾಗ ಅಕ್ರಮವಾಗಿ ಬಳಂಜಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವದು ಪತ್ತೆಯಾಗಿದೆ. ಅರಣ್ಯ ಅಧಿಕಾರಿಗಳಾದ ಅನಿಲ್ ಡಿಸೋಜ, ಅರಣ್ಯ ರಕ್ಷಕ ಮಂಜೇಗೌಡ, ಇತರರು ಮಾಲು ಸಮೇತವಾಗಿ ವಾಹನವನ್ನು ವಶಕ್ಕೆ ಪಡೆದುಕೊಂಡು ಆರೋಪಿಯ ಪತ್ತೆಗಾಗಿ ಬಲೆಬೀಸಿದ್ದಾರೆ. ನಂತರ ಅದೇ ದಿನ ಬೆಳಗ್ಗಿನ ಜಾವ ಸುಂಟಿಕೊಪ್ಪದಲ್ಲಿ ಗಸ್ತು ತಿರುಗುವಾಗ ಗದ್ದೆಹಳ್ಳದ ಗಿರಿಯಪ್ಪನ ಮನೆಗೆ ತೆÀರಳುವ ಹಾದಿಯಲ್ಲಿ ಮಾರುತಿ 800 ವಾಹನ ಕೆಎ12-ಎನ್-7154 ನಿಂತಿರುವದನ್ನು ಕಂಡು ಅರಣ್ಯಾಧಿಕಾರಿಗಳು ಅತ್ತ ಧಾವಿಸಿದ ಸಂದರ್ಭ ವಾಹನ ಚಾಲಕ ವಾಹನವನ್ನು ಬಿಟ್ಟು ಸಮೀಪದ ತೋಟ ದೊಳಗೆ ನುಗ್ಗಿ ಪರಾರಿಯಾಗಿದ್ದಾನೆ. ಅರಣ್ಯ ಅಧಿಕಾರಿಗಳು ಅಟ್ಟಿಸಿಕೊಂಡು ಹೋದರೂ ಕತ್ತಲೆಯಲ್ಲಿ ತಪ್ಪಿಸಿಕೊಂಡಿದ್ದಾನೆ. ಈ ವಾಹನದಲ್ಲಿ 2 ಬೀಟೆ ಮರದ ದಿಮ್ಮಿಗಳು ಪತ್ತೆಯಾಗಿದ್ದು, ಆನೆಕಾಡು ವಲಯ ಅರಣ್ಯಾಧಿಕಾರಿ ಕೆ.ಪಿ.ರಂಜನ್ ಚಾಲಕ ಸತೀಶ, ಅರಣ್ಯ ರಕ್ಷಕರಾದ ಪೊನ್ನಪ್ಪ ನವೀನ, ಗಿರಿ, ಆರ್.ಟಿ. ತಂಡದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಈ ಎರಡು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮರದ ಮೌಲ್ಯ ಸುಮಾರು 5 ಲಕ್ಷ ಎಂದು ಅರಣ್ಯ ಅಧಿಕಾರಿಗಳು ಪತ್ರಿಕೆಗೆ ತಿÀಳಿಸಿದ್ದಾರೆ.