ಆಟೋಟ ಸ್ಪರ್ಧೆ
ಮಡಿಕೇರಿ, ಸೆ. 14: ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅಕ್ಟೋಬರ್ 1 ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲೆಯಲ್ಲಿ ಆಚರಿಸುವ ಸಂಬಂಧ ಜಿಲ್ಲೆಯ ಹಿರಿಯ ನಾಗರಿಕರಿಗೆ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ತಾ. 15 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪುರುಷರಿಗೆ ಕ್ರೀಡಾ ಸ್ಪರ್ಧೆಗಳು: 60-70 ವರ್ಷದವರಿಗೆ 100 ಮೀ.ಓಟ, 3 ಕೆ.ಜಿ ಗುಂಡೆಸೆತ, 71-80 ವರ್ಷದವರಿಗೆ 75 ಮೀ.ಓಟ, 3 ಕೆ.ಜಿ ಗುಂಡೆಸೆತ, 80 ವರ್ಷ ಮೇಲ್ಪಟ್ಟವರಿಗೆ 200 ಮೀ.ನಡಿಗೆ, ಕ್ರಿಕೆಟ್ ಚೆಂಡು ಎಸೆತ. ಮಹಿಳೆಯರಿಗೆ ಕ್ರೀಡಾ ಸ್ಪರ್ಧೆಗಳು: 60-70 ವರ್ಷದವರಿಗೆ 400ಮೀ. ನಡಿಗೆ, ಕ್ರಿಕೆಟ್ ಚೆಂಡು ಎಸೆತ, 71-80 ವರ್ಷದವರಿಗೆ 200 ಮೀ.ನಡಿಗೆ, ಕ್ರಿಕೆಟ್ ಚೆಂಡು ಎಸೆತ, 80 ವರ್ಷ ಮೇಲ್ಪಟ್ಟವರಿಗೆ 100 ಮೀ ನಡಿಗೆ, ಕ್ರಿಕೆಟ್ ಚೆಂಡು ಎಸೆತ.
ಪುರುಷರಿಗೆ ಮತ್ತು ಮಹಿಳೆಯರಿಗೆ ಸಾಂಸ್ಕøತಿಕ ಸ್ಪರ್ಧೆಗಳು: 60-70 ವರ್ಷದವರಿಗೆ ಏಕ ಪಾತ್ರಾಭಿನಯ, ಜಾನಪದ ಗೀತೆ, 71-80 ವರ್ಷದವರಿಗೆ ಏಕ ಪಾತ್ರಾಭಿನಯ, ಜಾನಪದ ಗೀತೆ, 80 ವರ್ಷ ಮೇಲ್ಪಟ್ಟವರಿಗೆ ಏಕ ಪಾತ್ರಾಭಿನಯ, ಜಾನಪದ ಗೀತೆ ಸ್ಪರ್ಧೆಗಳು ನಡೆಯಲಿವೆ. ಜಿಲ್ಲೆಯ ಹಿರಿಯ ನಾಗರಿಕರು ಈ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ದೇವರಾಜು ಅವರು ತಿಳಿಸಿದ್ದಾರೆ.