ಕೂಡಿಗೆ, ಸೆ. 14: ಗಣೇಶ ವಿಸರ್ಜನೆ ವೇಳೆ 13ರ ಹರೆಯದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಸಮೀಪದ ಸಿದ್ಧಲಿಂಗಪುರದ ಅರಶಿನಕುಪ್ಪೆಯಲ್ಲಿ ನಡೆದಿದೆ.ಹೇಮಂತ್ (13) ಮೃತ ಬಾಲಕ. ಸಿದ್ಧಲಿಂಗಪುರದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಈತ ಸ್ಥಳೀಯರಾದ ಅನಂತಕುಮಾರ್ ಹಾಗೂ ಪದ್ಮ (ಮೊದಲ ಪುಟದಿಂದ) ದಂಪತಿಗಳ ಎರಡನೇ ಪುತ್ರನಾಗಿದ್ದು, ಗಣಪತಿ ವಿಸರ್ಜನೆ ವೇಳೆ ನೀರು ಪಾಲಾಗಿದ್ದಾನೆ. ಗುರುವಾರ ಮಧ್ಯಾಹ್ನದ ವೇಳೆ ಹನ್ನೆರಡು ಜನ ಬಾಲಕರ ತಂಡವು ಸಿದ್ಧಲಿಂಗಪುರದ ಬಿದಿರುಕಟ್ಟೆ ಕೆರೆಗೆ ಗಣೇಶ ವಿಸರ್ಜನೆಗೆಂದು ತೆರಳಿದ್ದು, ಈ ಸಂದರ್ಭ ಹೇಮಂತ್ ನೀರಿನಲ್ಲಿ ಮುಳುಗಿದ್ದು, ಎಲ್ಲರೂ ಸಮಕಾಲೀನರಾದ ಕಾರಣ ರಕ್ಷಿಸಲು ತೆರಳಲು ಮುಂದಾಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೃತ ಹೇಮಂತ್ ತಮ್ಮ ತಂದೆ-ತಾಯಂದಿರು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾನೆ.
ತೊರೆನೂರು ಗ್ರಾಮ ಪಂಚಾಯಿತಿ ಸದಸ್ಯ ರವಿ ಮಾತನಾಡಿ, ಗಣೇಶ ವಿಸರ್ಜನೆ ವೇಳೆ ನಡೆದ ದುರಂತದಲ್ಲಿ ಬಾಲಕ ನೀರು ಪಾಲಾಗಿದ್ದಾನೆ. ಇಂತಹ ಘಟನೆ ಮರುಕಳಿಸದಂತೆ ಪೋಷಕರು ಹಾಗೂ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಳ್ಳಬೇಕು ಎಂದರು. ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ