ಮಡಿಕೇರಿ, ಸೆ.14: ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ, ಇನ್ನರ್ ವೀಲ್, ರೋಟರಿ ಮಿಸ್ಪಿಹಿಲ್ಸ್ ಮತ್ತು ಲಯನ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ವರ್ಣಚಿತ್ರ ಸ್ಪರ್ಧೆಯನ್ನು ಈ ಹಿಂದೆ ಆಯೋಜಿಸಲ್ಪಟ್ಟಿದ್ದು, ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಸ್ಪರ್ಧೆಯನ್ನು ತಾ. 16 ರಂದು ಬೆಳಗ್ಗೆ 10.30 ಗಂಟೆಗೆ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಚೇತನ ಚಿಲುಮೆ ಸಭಾಂಗಣದಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ದೂ.ಸಂ. 08272-229004 ಮತ್ತು 9480745776ಗೆ ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮೋಹನ್ ಮೊಣ್ಣಪ್ಪ ಹಾಗೂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೀತಾಲಕ್ಷ್ಮಿ ಚಂದ್ರಪ್ಪ ಅವರು ತಿಳಿಸಿದ್ದಾರೆ.