ಮಡಿಕೇರಿ, ಸೆ. 12: ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2017-18ನೇ ಸಾಲಿನಲ್ಲಿ ರೂ. 237 ಕೋಟಿ ವಾರ್ಷಿಕ ವ್ಯವಹಾರ ಮಾಡಿದ್ದು, 92 ಲಕ್ಷ 23 ಸಾವಿರ ರೂ. ಲಾಭಗಳಿಸಿದೆ. ಸದಸ್ಯರಿಗೆ ಶೇ. 18 ಡಿವಿಡೆಂಡ್ ನೀಡಲು ನಿರ್ಧರಿಸಿದ್ದು, ಆ ಡಿವಿಡೆಂಟ್‍ನಲ್ಲಿ ಶೇ.4 ಹಣವನ್ನು ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿರುವ ಅರ್ಹ ಸೊಸೈಟಿ ಸದಸ್ಯರಿಗೆ ಅವಶ್ಯಕತೆಯನ್ನು ಪೂರೈಸಲು ಮಹಾಸಭೆಯಲ್ಲಿ ಸದಸ್ಯರು ನಿರ್ಧರಿಸಿದ್ದಾರೆ. ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಹಾಸಭೆಯು ಬ್ಯಾಂಕಿನ ಸಭಾಂಗಣದಲ್ಲಿ ತಾ. 9 ರಂದು ನಡೆಯಿತು. ಸಂಘದ ಅಧ್ಯಕ್ಷ ಕೆ.ಸಿ. ನಾರಾಯಣ ಗೌಡ ಅಧ್ಯಕ್ಷತೆ ವಹಿಸಿದ್ದರು.
ಮಹಾಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು, ಈ ಸಹಕಾರ ಸಂಘವು 1997ರಲ್ಲಿ ಗೌಡರ ಯುವ ಸೇವಾಸಂಘ ಸುಳ್ಯ ಇವರಿಂದ ಆರಂಭಗೊಂಡಿದ್ದು, 430 ಜನ ಸದಸ್ಯರಿಂದ ಆರಂಭಗೊಂಡ ಸಂಘವು ರೂ. 5 ಲಕ್ಷದ 95,300 ಪಾಲು ಬಂಡವಾಳದಿಂದ ಆರಂಭವಾಯಿತು. ತಾಲೂಕು ಮಟ್ಟಕ್ಕೆ ಸೀಮಿತವಾಗಿ ವ್ಯವಹಾರ ನಡೆಸಿದ್ದು, ಪ್ರಸ್ತುತ ತನ್ನ ಕಾರ್ಯಕ್ಷೇತ್ರವನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಿಕೊಂಡಿದೆ. ಮಾರ್ಚ್ 2018ರ ಅಂತ್ಯಕ್ಕೆ 9357 ಜನ ಸದಸ್ಯರಿದ್ದು, ಇವರಿಂದ 2,24,68,930 ಪಾಲು ಬಂಡವಾಳ ಸಂಗ್ರಹಿಸಿದೆ. ಸಂಘಕ್ಕೆ ವಿವಿಧ ರೀತಿಯಲ್ಲಿ ಠೇವಣಿಗಳಾದ ಉಳಿತಾಯ ಖಾತೆ, ಮಾಸಿಕ ಠೇವಣಿ, ಶ್ರೀ ವೆಂಕಟರಮಣ ನಿತ್ಯನಿಧಿ ಠೇವಣಿ, ಸಿಬ್ಬಂದಿ ಭದ್ರತಾ ಠೇವಣಿ, ನಿರಖು ಠೇವಣಿ, ಶ್ರೀ ವೆಂಕಟರಮಣ ನಗದುಪತ್ರ, ಶಾಶ್ವತ ನಿರಖು ಠೇವಣಿ ಇತ್ಯಾದಿ ಪಡೆಯುತ್ತಿದ್ದು, ವರದಿ ಸಾಲಿನ ಅಂತ್ಯಕ್ಕೆ ರೂ. 54,58,00,746,00 ರಷ್ಟು ಠೇವಣಿಯನ್ನು ಸಂಗ್ರಹಿಸಿದೆ.
ಮಹಾಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಅಧ್ಯಕ್ಷ ಕೆ.ಸಿ. ನಾರಾಯಣ ಗೌಡ, ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ್, ಉಪಾಧ್ಯಕ್ಷ ಪಿ.ಎಸ್. ಗಂಗಾಧರ್, ಮಾಜಿ ಅಧ್ಯಕ್ಷರಾದ ಎ.ವಿ. ತೀರ್ಥರಾಮು, ನಿತ್ಯಾನಂದ ಮುಂಡೋಡಿ ಹಾಗೂ ಚಂದ್ರಾ ಕೋಲ್ಚಾರ್ ಉತ್ತರಿಸಿದರು. ಸದಸ್ಯರುಗಳಾದ ರತ್ನಾಕರ ಗೌಡ ಬಳ್ಳಡ್ಕ, ಡಾ. ಎಸ್.ಎ. ಜ್ಞಾನೇಶ್, ಶೈಲೇಶ್, ವಿಟ್ಲ ಲಿಂಗಪ್ಪ ಗೌಡ, ಕೋಡಿ ಚಂದ್ರಶೇಖರ್ ಮಡಿಕೇರಿ, ಶ್ರೀಧರ ಗೌಡ ಪಾಲ್ತಾಡಿ, ಬಾಪೂ ಸಾಹೇಬ್, ಸೀತಾರಾಮ ಗೌಡ, ದಾಮೋದರ ನಾರಾಲು, ಗಿರಿಯಪ್ಪ ಗೌಡ ವಿಟ್ಲ, ಮೋಹನ್ ಕಾಯರ್ ಮಾರ್, ಲೋಕೇಶ್ವರಿ ವಿನಯಚಂದ್ರ, ಕೈಕುರೆ ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.