ನಾಪೋಕ್ಲು, ಸೆ. 14: ಇಲ್ಲಿನ ಪಿ.ಪಿ. ಫೌಂಡೇಶನ್ ಕುಟುಂಬದ ವತಿಯಿಂದ ಸ್ಥಳೀಯ ಶ್ರೀರಾಮಟ್ರಸ್ಟ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು. ಈ ಕುಟುಂಬದ 60 ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡಿ ಉನ್ನತಸ್ಥಾನ ಹೊಂದಿದ್ದು ಶಾಲೆಯ ನಿವೃತ್ತ ಪ್ರಾಂಶುಪಾಲ ಕಲ್ಯಾಟಂಡ ಪೂಣಚ್ಚ, ಎಂ.ಎಂ.ಕವಿತ, ಕೆ.ಎ.ಇಂದಿರ, ಹಾಗೂ ಟಿ.ಆರ್.ಸುಬ್ಬಮ್ಮ ಅವರನ್ನು. ಪಿ.ಪಿ. ಫೌಂಡೇಶನ್ ಅಧ್ಯಕ್ಷ ಮೊಯಿದೀನ್‍ಹಾಜಿ ಹಾಗೂ ಉಪಾಧ್ಯಕ್ಷ ಅಹಮದ್ ಶಿಕ್ಷಕರಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿಮಂದಣ್ಣ, ನಿರ್ದೇಶಕ ಅರೆಯಡ ಸೋಮಪ್ಪ, ನಿವೃತ್ತ ಡಿವೈಎಸ್ಪಿ ಬೊಪ್ಪಂಡ ಕುಶಾಲಪ್ಪ, ಬಿದ್ದಾಟಂಡ ಪಾಪ ಮುದ್ದಯ್ಯ, ಕೊಂಬಂಡ ಗಣೇಶ್, ನಾಯಕಂಡ ದೀಪಕ್, ಪ್ರಾಂಶುಪಾಲೆ ಪಿ.ಎಂ. ಶಾರದ, ಸಲಿಂ, ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಬೊಪ್ಪಂಡ ಡಾ. ಜಾಲಿ ಬೋಪಯ್ಯ ಅಧ್ಯಕ್ಷತೆ ವಹಿಸಿದ್ದರು. ಸನ್ಮಾನಿತರು ಹಾಗೂ ಇನ್ನಿತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.