ಮಡಿಕೇರಿ, ಸೆ. 14: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ. ಕೆ. ಸೌಮ್ಯ ಕೆ.ಎಫ್.ಐ.ಎಸ್.ಟಿ. ಮಟ್ಟ (2)ರ ವಿ.ಜಿ.ಎಸ್.ಟಿ. ಯೋಜನೆಯಡಿಯಲ್ಲಿ ಸಲ್ಲಿಸಲಾದ “ಬಯೋಸಿಂಥಸಿಸ್ ಅಂಡ್ ಕ್ಯಾರೆಕ್ಟರೈಜೇಷನ್ ಆಫ್ ನ್ಯಾಯೋಪಾರ್ಟಿಕಲ್ಸ್ ಫ್ರಮ್ ವೈಲ್ಡ್ ಎಡಿಬಲ್ ಫ್ರೂಟ್ಸ್ ಆಫ್ ವೆಸ್ಟ್ರನ್ ಘಾಟ್ಸ್, ಕೊಡಗು ಅಂಡ್ ಇವ್ಯಾಲುಯೇಷನ್ ಆಫ್ ದೇರ್ ಫಾರ್ಮಸೀಟಿಕಲ್ ಪ್ರಾಪರ್ಟೀಸ್” ಎಂಬ ಹೆಸರಿನ ಸಂಶೋಧನಾ ಯೋಜನೆಯಲ್ಲಿ ಆಯ್ಕೆಯಾಗಿರುತ್ತಾರೆ ಮತ್ತು ಈ 2 ವರ್ಷಗಳ ಅವಧಿಯ ಯೋಜನೆಗೆ ಒಟ್ಟು ಅನುದಾನ ಪ್ರಶಸ್ತಿ ರೂ. 40 ಲಕ್ಷ ಪಡೆದಿರುತ್ತಾರೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.