ಕೂಡಿಗೆ, ಸೆ. 14: ರಾಜ್ಯ ರೇಷ್ಮೆ ತಾಂತ್ರಿಕ ನೌಕರರ ಸಂಘ ಬೆಂಗಳೂರು ಇದರ ಆಡಳಿತ ಮಂಡಳಿಯ ರಾಜ್ಯ ಪರಿಷತ್ ಸದಸ್ಯರಾಗಿ ಕೂಡಿಗೆ ರೇಷ್ಮೆ ಕೃಷಿ ಕ್ಷೇತ್ರದ ಮೇಲ್ವಿಚಾರಕ ಎಂ.ಎಸ್. ಮಹೇಶ್ ಅವರು ನೇಮಕ ಗೊಂಡಿದ್ದಾರೆ. ರಾಜ್ಯ ರೇಷ್ಮೆ ಇಲಾಖೆಯ ತಾಂತ್ರೀಕ ನೌಕರರ ಸಂಘದ ರಾಜ್ಯಾಧ್ಯಕ್ಷರು ರಾಜ್ಯ ಸಮಿತಿಯನ್ನು ರಚಿಸಿ, ಕೊಡಗು ಜಿಲ್ಲೆಯಿಂದಲೂ ಒಬ್ಬ ಸದಸ್ಯರನ್ನು ನೇಮಕ ಮಾಡಿದ್ದಾರೆ.