ಮಡಿಕೇರಿ, ಸೆ. 14: ಇಲ್ಲಿನ ಅಶೋಕಪುರ ಸಂತೋಷ ಯುವಕ ಸಂಘದ ವತಿಯಿಂದ ಅಶೋಕಪುರ ಮುಖ್ಯರಸ್ತೆ ಬದಿಯಲ್ಲಿ ಜೆ.ಸಿ.ಬಿ. ಮೂಲಕ ರಸ್ತೆಯ ಎರಡು ಬದಿಯನ್ನು ಸ್ವಚ್ಛಗೊಳಿಸಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ನಗರಸಭಾ ಸದಸ್ಯ ಹೆಚ್.ಎಂ. ನಂದಕುಮಾರ್, ವೀಣಾಕ್ಷಿ ರವಿ ಮತ್ತು ಸಂಘದ ಅಧ್ಯಕ್ಷ ಅವೀನ್ ಕುಮಾರ್ ಚಾಲನೆ ನೀಡಿದರು. ಈ ಸಂದರ್ಭ ಸಂಘದ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.