*ಸುಂಟಿಕೊಪ್ಪ, ಸೆ. 12: ತಾಕೇರಿ ವಿಭಾಗದ ರೈತರ ಶೇ. 90ರಷ್ಟು ಕಾಫಿ, ಕರಿಮೆಣಸು, ನಾಟಿ ಮಾಡಿದ ಗದ್ದೆ ಅತಿವೃಷ್ಟಿಯಿಂದ ಹಾಳಾಗಿದ್ದು, ಕೃಷಿಕರು ಸಹಕಾರ ಬ್ಯಾಂಕ್ ಹಾಗೂ ವಾಣಿಜ್ಯ ಬ್ಯಾಂಕ್‍ನಿಂದ ಪಡೆದ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕೆಂದು ತಾಕೇರಿ ಶ್ರೀ ಈಶÀ್ವರ ದೇವರ ಗ್ರಾಮಾಭಿವೃದ್ಧಿ ಮಂಡಳಿಯವರು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ತಾಕೇರಿ ಗ್ರಾಮದಲ್ಲಿ 400 ಕುಟುಂಬಗಳಿದ್ದು 2000 ಜನಸಂಖ್ಯೆ ಇದೆ. ಶೇ. 90 ರಷ್ಟು ಮಂದಿ ಕೃಷಿಕರಾಗಿದ್ದು, ಇಲ್ಲಿ 6000 ಎಕರೆ ಕೃಷಿ ಭೂಮಿ ಇದ್ದು ಇದರಲ್ಲಿ 4000 ಎಕರೆ ಕಾಫಿ, ಕರಿಮೆಣಸು, 1000 ಎಕರೆ ನಾಟಿ ಮಾಡಿದ ಗದ್ದೆ ಅತಿವೃಷ್ಟಿಯಿಂದ ಹಾನಿಯಾಗಿದೆ. ಪ್ರತಿ ವರ್ಷ 100 ರಿಂದ 120 ಇಂಚು ಮಳೆಯಾದರೆÉ ಈ ವರ್ಷ 200 ಇಂಚು ಮಳೆಯಾಗಿದೆ. ಕೃಷಿ ಫಸಲು ಶೇ. 80 ರಷ್ಟು ನಷ್ಟವಾಗಿದೆ. ಈಗ ಫಸಲು ನಷ್ಟದಿಂದ ಜೀವನ ಸಾಗಿಸಲು ಕಷ್ಟವಾಗಿರುವದರಿಂದ ಸಹಕಾರ ಬ್ಯಾಂಕ್ ಹಾಗೂ ವಾಣಿಜ್ಯ ಬ್ಯಾಂಕ್‍ನಿಂದ ಬೆಳೆಗಾರರು ಪಡೆದ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆÉಂದು ಹಾಗೂ ಬೆಳೆಹಾನಿಗೆ ತಕ್ಕ ಪರಿಹಾರ ನೀಡಬೇಕೆಂದು ಮಂಡಳಿ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ತಾಲೂಕು ಪಂಚಾಯಿತಿ ಸದಸ್ಯ ಬಿ.ಬಿ. ಸತೀಶ, ಕಾರ್ಯದರ್ಶಿ ದಯಾನಂದ, ಉಪಾಧÀ್ಯಕ್ಷ ಲೋಕೇಶ್ ಸುಧೀರ್ ಮನವಿಯಲ್ಲಿ ಕೋರಿದ್ದಾರೆ.