ಮಡಿಕೇರಿ, ಸೆ. 14: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಉಂಟಾದ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ತಲಪಿಸುವ ಸಲುವಾಗಿ ವೈದ್ಯಾಧಿಕಾರಿಗಳು ಮತ್ತು ಶುಶ್ರೂಷಕಿಯರನ್ನು ಒಳಗೊಂಡ ತಂಡ ನೆರೆ ಸಂತ್ರಸ್ತ ಸ್ಥಳಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡುವದು, ಚಿಕಿತ್ಸೆ ನೀಡುವದು ಮತ್ತು ಆರೋಗ್ಯ ಶಿಕ್ಷಣ ನೀಡುವ ಸಲುವಾಗಿ 9 ಸಂಚಾರಿ ಆರೋಗ್ಯ ತಂಡ ರಚನೆಯಾಗಿದೆ. ಈ ಸಂಚಾರಿ ಆರೋಗ್ಯ ತಂಡಗಳು ವೇಳಾಪಟ್ಟಿಯಂತೆ ಮಳೆಯಿಂದ ಹಾನಿಗೊಂಡ ಗ್ರಾಮಗಳಿಗೆ ಭೇಟಿ ನೀಡಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದೆ.
ಮಡಿಕೇರಿ ತಾಲೂಕು: ಪ್ರತಿ ಸೋಮವಾರ ಮತ್ತು ಗುರುವಾರದಂದು ಬಲಮುರಿ, ಕೊಣ್ಣಂಜಗೇರಿ, ಕಿರುಂದಾಡು, ಕೈಕಾಡು, ಬಾವಲಿ, ಮದೆನಾಡು, ಜೋಡುಪಾಲ, ಅರೆಚಾಲು, ಬೆಳಕುಮಾನಿ, ಕಾಟಕೇರಿ, ಎರಡನೇ ಮೊಣ್ಣಂಗೇರಿ, ಅರೆಕಾಡು, ಹೊಸ್ಕೇರಿ, ಕೊಳಗದಾಳು, ಬಿ.ಬಾಡಗ, ಬೇಂಗೂರು, ಕಡಗದಾಳು, ಇಬ್ನಿವಳವಾಡಿ, ಕೋರಂಗಾಲ, ಚೇರಂಗಾಲ, ತಾವೂರು.
ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಕೊಟ್ಟಮುಡಿ, ಕಣ್ಣಬಲಮುರಿ, ಚೆರಿಯಪರಂಬು, ಐಕೊಳ, ಮೇಕೇರಿ, ಯವಕಪಾಡಿ, ಮರಂದೋಡ, ಅರಪಟ್ಟು, ಕರಡ, ಕೊಕೇರಿ, ಚೇಲಾವರ, ನರಿಯಂದಡ, ಮಕ್ಕಂದೂರು, ಹೆಮ್ಮೆತ್ತಾಳು, ಮೇಘತ್ತಾಳು, ಉದಯಗಿರಿ, ಮುಕ್ಕೋಡ್ಲು, ಹಮ್ಮಿಯಾಲ, ಮುಟ್ಲು, ಕಾಲೂರು, ದೇವಸ್ತೂರು, ಹೆಬ್ಬೆಟ್ಟಗೇರಿ, ಗಾಳಿಬೀಡು, ಒಂದನೇ ಮೊಣ್ಣಂಗೇರಿ, ವಣಚಲು.
ಸೋಮವಾರಪೇಟೆ ತಾಲೂಕು: ಪ್ರತಿ ಸೋಮವಾರ ಮತ್ತು ಗುರುವಾರದಂದು ಹಾನಗಲ್ಲು, ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರು, ಶೆಟ್ಟಳ್ಳಿ, ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ, ಚೌಡ್ಲು, ಗೌಡಳ್ಳಿ, ದೊಡ್ಡಮಳ್ತೆ, ಐಗೂರು, ಬೇಳೂರು, ಆಲೂರು-ಸಿದ್ದಾಪುರ, ನೇರುಗಳಲೆ.
ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಏಳನೇ ಹೊಸಕೋಟೆ, ಸುಂಟಿಕೊಪ್ಪ, ಕೆದಕಲ್, ಕೊಡಗರಹಳ್ಳಿ, ಕಂಬಿಬಾಣೆ, ಶನಿವಾರಸಂತೆ, ನಿಡ್ತ, ಹಂಡ್ಲಿ, ದುಂಡಳ್ಳಿ, ಕೊಡ್ಲಿಪೇಟೆ, ಬೆಸೂರು, ಗುಡ್ಡೆಹೊಸೂರು, ನಂಜರಾಯಪಟ್ಟಣ.
ಪ್ರತಿ ಬುಧವಾರ ಮತ್ತು ಶನಿವಾರದಂದು ಮಾದಾಪುರ, ಗರ್ವಾಲೆ, ಕಿರಗಂದೂರು, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೊಡ್ಲಿಪೇಟೆ, ಕಟ್ಟೆಪುರ.
ವೀರಾಜಪೇಟೆ ತಾಲೂಕು: ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಕರಡಿಗೋಡು, ಗುಹ್ಯ, ಬಿಟ್ಟಂಗಾಲ, ಬೇತ್ರಿ ಮತ್ತು ಕೊಂಡಂಗೇರಿ. ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಕುಟ್ಟ, ಕೆ.ಬಾಡಗ, ಹೊಸೂರು, ಅಮ್ಮತ್ತಿ ಮತ್ತು ಚೆನ್ನಯ್ಯನಕೋಟೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಅವರು ಮಾಹಿತಿ ನೀಡಿದ್ದಾರೆ.