ವೀರಾಜಪೇಟೆ, ಸೆ. 14: ವೀರಾಜಪೇಟೆ ಬಳಿಯ ಆರ್ಜಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಪಂ.ತಿ ಆಡಳಿತದಲ್ಲಿ ಸರ್ವಾಧಿಕಾರದ ಧೋರಣೆ ತಾಳುತ್ತಿದ್ದು, ಅಧ್ಯಕ್ಷರ ಹಾಗೂ ಸದಸ್ಯರ ಸಭೆಯಲ್ಲಿ ಅನ್ವರುಲ್ ಹುದಾ ವಿದ್ಯಾಸಂಸ್ಥೆಗೆ ವಿದ್ಯುತ್ ಸಂಪರ್ಕ ಪಡೆಯಲು ನಿರಾಪೇಕ್ಷಣಾ ಪತ್ರ ನೀಡಲು ಪಂಚಾಯಿತಿಯ 7 ಮಂದಿ ಸದಸ್ಯರುಗಳ ವಿರೋಧ ವಿದ್ದರೂ ನಡಾವಳಿಕೆಯನ್ನು ತಿದ್ದಿ ವಿದ್ಯಾ ಸಂಸ್ಥೆಗೆ ನಿರಾಪೇಕ್ಷಣಾ ಪತ್ರ ನೀಡ ಲಾಗಿದೆ. ಜಿಲ್ಲಾಡಳಿತ ಹಾಗೂ ಪೊನ್ನಂಪೇಟೆ ತಾಲೂಕು ಪಂ. ಕಾರ್ಯ ನಿರ್ವಹಣಾಧಿಕಾರಿಗೆ ತುರ್ತು ತನಿಖೆಗೆ ಲಿಖಿತ ದೂರು ನೀಡಿರುವದಾಗಿ ಪಂ. ಅಧ್ಯಕ್ಷೆ ಹೆಚ್. ಎನ್. ಗಾಯತ್ರಿ ತಿಳಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಹಿಂದಿನ ಪಿ.ಡಿ.ಓ.ಗಳೆಲ್ಲ ಕಾನೂನು ಬದ್ಧ ವಾಗಿ ವಿದ್ಯಾ ಸಂಸ್ಥೆಯ ನಿರಾಪೇಕ್ಷಣಾ ಅರ್ಜಿಯನ್ನು ಪರಿಶೀಲಿಸಿ ತಿರಸ್ಕರಿಸುತ್ತಿದ್ದರು. ಪಂಚಾಯಿತಿಯ ಬಹುತೇಕ ಮಂದಿ ಸದಸ್ಯರು ವಿದ್ಯಾ ಸಂಸ್ಥೆ ವಿವಾದಿತ ಜಾಗದಲ್ಲಿರುವದ ರಿಂದ ಜಿಲ್ಲಾ ಮತ್ತು ತಾಲೂಕು ಆಡಳಿತದ ವರದಿಯ ಮೇಲೆ ಮುಂದಿನ ಕ್ರಮ ಕೈಗೊಳ್ಳ ಬಹುದು ಎಂದು ತೀರ್ಮಾನಿಸಿದ್ದರೂ ಪಿ.ಡಿ.ಓ. ಯಾವದನ್ನು ಲೆಕ್ಕಿಸದೆ ಅಧ್ಯಕ್ಷರು ಹಾಗೂ ಇತರ ಬಹುಮತ ಸದಸ್ಯರು ಗಳ ಗಮನಕ್ಕೆ ತೆಗೆದುಕೊಳ್ಳದೆ ಸ್ವತ: ಆಸಕ್ತಿಯಿಂದ ಸಂಸ್ಥೆಗೆ ನಿರಾಪೇಕ್ಷಣಾ ಪತ್ರ ನೀಡಿದ್ದಾರೆ. ಇದೇ ರೀತಿ ಪೆರುಂಬಾಡಿ ಚೆಕ್ ಪೋಸ್ಟ್ ಬಳಿಯಿ ರುವ ಕೂರ್ಗ್‍ಗೇಟ್ ಸೇರಿದಂತೆ ಎರಡು ಹೊಟೇಲ್‍ಗಳಿಗೂ ಕಾನೂನು ಬಾಹಿರವಾಗಿ ಅನುಮತಿ ನೀಡ ಲಾಗಿದೆ. ಈ ಮೂರು ಪ್ರಕರಣಗಳ ಬಗ್ಗೆ ಮೇಲಧಿಕಾರಿಗಳು ಕೂಲಂಕಷ ವಾಗಿ ತನಿಖೆ ನಡೆಸಿದರೆ ಮಾತ್ರ ನಿಜಾಂಶ ಬೆಳಕಿಗೆ ಬರಲಿದೆ. ಇಂತಹ ಪಿ.ಡಿ.ಓ.ಯಿಂದಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಪರ ಕೆಲಸಗಳು ನೆನೆಗುದಿಗೆ ಬಿದ್ದಿವೆ ಎಂದು ಆರೋಪಿಸಿದರು.
ಪಂಚಾಯಿತಿ ಸದಸ್ಯೆ ಶ್ರೀಜಾ ಜಯಕುಮಾರ್ ಮಾತನಾಡಿ, ವಿದ್ಯಾಸಂಸ್ಥೆಯ ನಿರಾಪೇಕ್ಷಣಾ ಪತ್ರದ ಸಂಬಂಧದಲ್ಲಿ ಸದಸ್ಯರುಗಳ ನಡುವೆ ಪರೋಕ್ಷವಾಗಿ ಹಣದ ಪ್ರಭಾವವು ಬೀರಿದೆ ಎಂಬ ದೂರಿದೆ. ಆರೋಪ ದಂತೆ ಯಾವ ಸದಸ್ಯರುಗಳು ಯಾವ ಪ್ರಭಾವಕ್ಕೊಳಗಾಗದೆ ಕಾನೂನಿನ ನಿಯಮ ನಿಬಂಧನೆಗಳನ್ನು ಪಾಲಿಸಿ ದ್ದಾರೆ. ಸದಸ್ಯರುಗಳ ವಿರೋಧದ ನಡುವೆಯೂ ನಿರಾಪೇಕ್ಷಣಾ ಪತ್ರ ನೀಡಿರುವದು ಸರಿಯಲ್ಲ. ಇದು ಪಾರದರ್ಶಕವಾಗಿ ತನಿಖೆಯಾಗ ಬೇಕು ಎಂದರು. ಗೋಷ್ಠಿಯಲ್ಲಿ ಸದಸ್ಯೆ ಹೆಚ್.ಪಿ. ಪಾರ್ವತಿ ಹಾಜರಿದ್ದರು.