ಸಿದ್ದಾಪುರ, ಸೆ. 12: ಸಿದ್ದಾಪುರ ಠಾಣಾ ವ್ಯಾಪ್ತಿಗೊಳಪಡುವ ಗೌರಿ-ಗಣೇಶ ಸಮಿತಿಗಳ ಪದಾಧಿಕಾರಿಗಳ ಸಭೆಯನ್ನು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿ ಸುಬ್ರಮಣ್ಯ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಠಾಣಾಧಿಕಾರಿ, ಕಾನೂನು ಚೌಕಟ್ಟಿನಡಿಯಲ್ಲಿ ಎಲ್ಲಾ ಸಮಿತಿಯವರು ಗೌರಿ-ಗಣೇಶ ಉತ್ಸವವನ್ನು ಆಚರಿಸಬೇಕೆಂದರು.
ಕಾರ್ಯಕ್ರಮವನ್ನು ನಡೆಸುವ ಮುಂಚಿತ ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಳ್ಳಬೇಕೆಂದರು. ಉತ್ಸವ ಮೂರ್ತಿಗಳನ್ನು ಕುಳ್ಳರಿಸಿದ ಸ್ಥಳದಲ್ಲಿ ಕಾವಲುಗಾರರನ್ನು ನೇಮಿಸಬೇಕೆಂದರು. ಈ ಸಂದರ್ಭ ಠಾಣೆಯ ಸಹಾಯಕ ಠಾಣಾಧಿಕಾರಿಗಳಾದ ಬೋಜಪ್ಪ, ವಸಂತ್ ಕುಮಾರ್ ಹಾಗೂ ಸಿದ್ದಾಪುರ ಠಾಣಾ ವ್ಯಾಪ್ತಿಗೊಳಪಡುವ ಗೌರಿ-ಗಣೇಶ ಸಮಿತಿಗಳ ಪದಾಧಿಕಾರಿಗಳು ಹಾಜರಿದ್ದರು.