ಗುಡ್ಡೆಹೊಸೂರು, ಸೆ. 12: ಚಿಕ್ಕಬಳ್ಳಾಪುರ ಛಾಯಾಗ್ರಾಹಕರ ಸಂಘದಿಂದ ಕೊಡಗಿನಲ್ಲಿ ಮಳೆಯಿಂದ ಮನೆ ಕಳೆದುಕೊಂಡ ಕೊಡಗಿನ ಛಾಯಾಗ್ರಾಹಕರಿಗೆ ಪರಿಹಾರ ನೀಡಲಾಯಿತು.
ಸಂಪೂರ್ಣವಾಗಿ ಮನೆಯನ್ನು ಕಳೆದುಕೊಂಡ ಮಡಿಕೇರಿಯ ಛಾಯಾಗ್ರಾಹಕ ಅಂತೋಣಿ ಲಾರೆನ್ಸ್ ಅವರಿಗೆ ರೂ. 30 ಸಾವಿರ, ಭಾಗಶಃ ಮನೆಗೆ ಹಾನಿಯಾಗಿದ್ದ ಮರಗೋಡುವಿನ ಪ್ರದೀಪ್ ಮತ್ತು ಚೆಟ್ಟಳ್ಳಿಯ ಛಾಯಾಗ್ರಾಹಕ ಲೂಯಿಸ್ ಅವರಿಗೆ ತಲಾ ರೂ. 5 ಸಾವಿರ ಪರಿಹಾರ ನೀಡಲಾಯಿತು.
ಈ ಸಂದರ್ಭ ಕೆ.ಸಿ.ಎ. ನಿರ್ದೇಶಕ ವಿ. ಶ್ರೀನಿವಾಸ ಆಚಾರಿ, ಚಿಕ್ಕಬಳ್ಳಾಪುರ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಬಿ.ಜಿ. ಸೀತಾರಾಮ್ ಕಟ್ಟಿ, ತಾಲೂಕು ಅಧ್ಯಕ್ಷ ಎಸ್. ಸುರೇಂದ್ರ, ಆರ್.ಜಿ. ಲ್ಯಾಬ್ ಮಾಲೀಕ ಜಯರಾಮ್, ರಾಮಕೃಷ್ಣ, ಎಸ್. ಶಶಿಧರ, ಕೊಡಗು ಜಿಲ್ಲಾ ಛಾಯಾಗ್ರಾಹಕ ಸಂಘದ ಜಿಲ್ಲಾಧ್ಯಕ್ಷ ಗುಡ್ಡೆಮನೆ ವಿಶುಕುಮಾರ್ ಶ್ರೀ ಕಾವೇರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಕುಶಾಲನಗರದ ಬಿ.ಎಸ್. ಶಾಂತಪ್ಪ, ಮತ್ತು ವಿಜಯಕುಮಾರ್ ಹಾಜರಿದ್ದರು. ಪರಿಹಾರ ಹಣವನ್ನು ಗುಡ್ಡೆಹೊಸೂರಿನ ವಿಶ್ವ ಸ್ಟೂಡಿಯೋದಲ್ಲಿ ವಿತರಿಸಲಾಯಿತು.