ಸಂಪಾಜೆ, ಸೆ. 14: ಪಯಸ್ವಿನಿ ಪ್ರಾ.ಕೃ.ಪ.ಸ.ಸಂಘದ ಆಡಳಿತ ಮಂಡಳಿಯ ಸಾಮಾನ್ಯ ಸಭೆಯು ತಾ.14ರಂದು ಸಂಘದ ಮುಖ್ಯ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ನೂತನ ಉಪಾಧ್ಯಕ್ಷರಾಗಿ ದಯಾನಂದ ಪನೇಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಾಲಚಂದ್ರ ಕಳಗಿ ಅವರು ನೂತನ ಉಪಾಧ್ಯಕ್ಷರಿಗೆ ಶುಭ ಹಾರೈಸಿದರು, ಮುಖ್ಯಕಾರ್ಯ ನಿರ್ವಹಣಾ ಅಧಿಕಾರಿ ಆನಂದ ಬಿ.ಕೆ., ನಿರ್ದೇಶಕರಾದ ತೀರ್ಥಪ್ರಸಾದ್ ಕೊಯನಾಡು, ಪಕೀರ ಹರಿಜನ, ರಮಾನಂದ ಬಾಳೆಕಜೆ, ದಿನೇಶ ಸಣ್ಣಮನೆ, ಶ್ರೀಕಾಂತ್ ಕೆದಂಬಾಡಿ, ಮನೋರಮಾ ಬೋಳ್ತಾಜೆ, ರೇವತಿ ಹೊನ್ನಪ್ಪ ಕಾಸ್ಪಾಡಿ, ಆಂತರಿಕ ಲೆಕ್ಕಪರಿಶೋಧಕ ರತ್ನಾಕರ ಬಳ್ಳಡ್ಕ ಹಾಗೂ ಸಿಬ್ಬಂದಿವರ್ಗದವರು ಇದ್ದರು.